ಇಸ್ಲಾಮಾಬಾದ್: ನ 13 (DaijiworldNews/MR): ಪಾಕಿಸ್ತಾನಕ್ಕೆ ಹಣಕಾಸಿನ ಸಹಾಯದ ಜೊತೆಗೆ ಸೇನಾ ನೆರವನ್ನು ಚೀನಾ ನೀಡುತ್ತಿರುವುದು ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ.
ಇದೀಗ ಚೀನಾ ಪಾಕಿಸ್ತಾನವನ್ನು ಬಳಸಿಕೊಂಡು ಭಾರತದ ಬಳಿ ಬಂದಿದೆ. ಕರಾಚಿ ಬಂದರಿನಲ್ಲಿ ಚೀನೀ ಯುದ್ಧನೌಕೆಗಳು, ಜಲಾಂತರ್ಗಾಮಿ ಮತ್ತು ಸೇನಾ ಬೆಂಬಲ ವ್ಯವಸ್ಥೆಯ ಉಪಸ್ಥಿತಿಯನ್ನು ಉಪಗ್ರಹ ಚಿತ್ರಗಳಿಂದ ಸೂಚಿಸಲ್ಪಟ್ಟಿವೆ ಎಂದು ಮಾಹಿತಿ ಹೊರ ಬಿದ್ದಿದೆ.
ಸೇನಾ ಅಭ್ಯಾಸ ನೆಪದಲ್ಲಿ ಚೀನಾ ಭಾರತದ ಹತ್ತಿರಕ್ಕೆ ತನ್ನ ಯುದ್ಧ ನೌಕಾ ಹಡಗುಗಳನ್ನು ತಂದಿದೆ . ಇದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಸೀ ಗಾರ್ಡಿಯನ್ -3 ಸೇನಾ ಅಭ್ಯಾಸವು, ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಕಡಲ ಅಸ್ತಿತ್ವವನ್ನು ವಿಸ್ತರಿಸಿದೆ. ಇದು ಆಫ್ರಿಕಾದ ಹಾರ್ನ್ನಲ್ಲಿರುವ ಜಿಬೌಟಿಯಲ್ಲಿ ಪ್ರಮುಖ ನೆಲೆಯ ನಿರ್ಮಾಣವನ್ನು ಒಳಗೊಂಡಿದೆ.
ಪಾಕಿಸ್ತಾನ ನೌಕಾಪಡೆಗೆ ಇತ್ತೀಚೆಗೆ ನಾಲ್ಕು ಟೈಪ್-054 A/P ಫ್ರಿಗೇಟ್ಗಳು ಸೇರಿದಂತೆ ಹಲವಾರು ಆಧುನಿಕ ವೇದಿಕೆಗಳನ್ನು ಪ್ರಾದೇಶಿಕ ನೌಕಾಪಡೆಗಳಿಗೆ ಮಾರಾಟ ಕೂಡ ಇದರಲ್ಲೇ ಸೇರಿದೆ.
ಕಳೆದ ವರ್ಷ ಹಿಂದೂ ಮಹಾಸಾಗರದಲ್ಲಿ ಹಲವಾರು ಚೀನೀ ಕಣ್ಗಾವಲು ಮತ್ತು ಸಮುದ್ರಶಾಸ್ತ್ರೀಯ ಸಮೀಕ್ಷೆ ಹಡಗುಗಳು ಸಹ ಪತ್ತೆಯಾಗಿದ್ದವು.
ಕರಾಚಿಯಲ್ಲಿ ಬೀಡು ಬಿಟ್ಟಿರುವ ಯುದ್ಧ ಉಪಕರಣಗಳ ಪೈಕಿ ಚೀನಾದ ಟೈಪ್ 039 ಡೀಸೆಲ್, ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆ ಕೂಡ ಇದೆ.
ಈ ಜಲಾಂತರ್ಗಾಮಿ ನೌಕೆಯ ನಿಖರವಾದ ಸಾಮರ್ಥ್ಯ, ಅದು ಎಷ್ಟು ಶಾಂತವಾಗಿದೆ ಎಂಬುದನ್ನು ಒಳಗೊಂಡಂತೆ, ನೌಕಾ ರಹಸ್ಯಗಳನ್ನು ಅದು ಊಹಿಸಬಲ್ಲದು. 2013ರದಿಂದ ಈವರೆಗು ಚೀನಾ ಸೇನಾಯು 8 ಬಾರಿ ಹಿಂದೂ ಮಹಾಸಾಗರದಲ್ಲಿ ಜಲಾಂತಾರ್ಗಮಿಗಳನ್ನು ನಿಯೋಜಿಸಿದೆ ಎಂದು ಹೇಳಲಾಗಿದೆ.