ಶ್ರೀಲಂಕಾ , ನ 14 (DaijiworldNews/RA): ಶ್ರೀಲಂಕಾದಲ್ಲಿ ಇಂದು ಪ್ರಬಲ ಭೂಕಂಪ ಸಂಭವಿಸಿದೆ.ಈ ಕುರಿತು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದ್ದು 6.2 ತೀವ್ರತೆಯ ಭೂಕಂಪ ಸಂಭವಿಸಿದ್ದು ಇದರಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ನವಂಬರ್ 4ರಂದು 6.2 ತೀವ್ರತೆಯ ಭೂಕಂಪ 12:31:10 IST ಗಂಟೆಗೆ ಸಂಭವಿಸಿದೆ. ಭೂಕಂಪದ ಲ್ಯಾಟ್: -2.96 & ಉದ್ದ: 86.54, ಆಳ: 10 ಕಿಮೀ , ಸ್ಥಳ: 1326 ಕಿಮೀ SE ಆಫ್ ಕೊಲಂಬೊ, ಶ್ರೀಲಂಕಾ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಎಕ್ಸ್ನಲ್ಲಿ ತಿಳಿಸಿದೆ.
ಆಗ್ನೇಯಕ್ಕೆ 800 ಕಿ.ಮೀ ದೂರದಲ್ಲಿ ಹಿಂದೂ ಮಹಾಸಾಗರದಲ್ಲಿ 10 ಕಿ.ಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ.ಇದರಿಂದ ಶ್ರೀಲಂಕಾಕ್ಕೆ ಯಾವುದೇ ಅಪಾಯವಿಲ್ಲ ಎಂದು ಭೂವೈಜ್ಞಾನಿಕ ಸಮೀಕ್ಷೆ ಮತ್ತು ಗಣಿ ಬ್ಯೂರೋ ತಿಳಿಸಿದೆ.
ಸೋಮವಾರ ದಕ್ಷಿಣ ಸುಡಾನ್ ಮತ್ತು ಉಗಾಂಡಾ ನಡುವಿನ ಗಡಿ ಭಾಗದಲ್ಲಿ 4.9 ತೀವ್ರತೆ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ತಿಳಿಸಿದೆ.
ಇನ್ನು ಇತ್ತ ಸೋಮವಾರ ಸಂಜೆ ತಜಕಿಸ್ತಾನ್ನಲ್ಲಿ 4.9 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನ ಕೇಂದ್ರದ ಪ್ರಕಾರ, ಕಂಪನವು ಸಂಜೆ 5:46 ರ ಸುಮಾರಿಗೆ ಸಂಭವಿಸಿದೆ. ಇದಕ್ಕಿಂತ ಮೊದಲು ಅಂದರೆ ಭಾನುವಾರ ಇಂಡೋನೇಷ್ಯಾದ ವೆಸ್ಟ್ ಟಿಮೋರ್ ಬಳಿ ಭಾನುವಾರ 5.6 ತೀವ್ರತೆಯ ಭೂಕಂಪ ಸಂಭವಿಸಿದೆ. ಪಾಕಿಸ್ತಾನದಲ್ಲೂ 4.1 ತೀವ್ರತೆಯ ಭೂಕಂಪ ಉಂಟಾಗಿದೆ ಎಂದು ತಿಳಿದು ಬಂದಿದೆ.