ಗಾಜಾ, ಡಿ 3 (DaijiworldNews/SK): ಗಾಜಾಗೆ ಯುಎನ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ ಪೂರೈಸುತ್ತಿದ್ದ ಪರಿಹಾರ ಸಾಮಾಗ್ರಿಗಳ ನಡುವೆ ಕ್ಷಿಪಣಿಗಳನ್ನು ಅಡಗಿಸಿಟ್ಟಿರುವುದನ್ನು ಇಸ್ರೇಲ್ ಸೈನಿಕರು ಪತ್ತೆ ಮಾಡಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ತಿಳಿಸಿದೆ.
ಉತ್ತರ ಗಾಜಾದ ಜನನಿಬಿಡ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ರಾಕೆಟ್ಗಳು ಪತ್ತೆಯಾಗಿವೆ. ಇಸ್ರೇಲ್ ನ 261 ನೇ ಬ್ರಿಗೇಡ್ನ ಯುದ್ಧ ತಂಡದ 7007 ನೇ ಬೆಟಾಲಿಯನ್ನ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ, ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗೆ ನೀಡುವ ಪರಿಹಾರ ಸಾಮಾಗ್ರಿಗಳ ಪೆಟ್ಟಿಗೆಗಳ ಕೆಳಗೆ, ಡಜನ್ ಗಟ್ಟಲೆ ರಾಕೆಟ್ಗಳು, ಮಾರ್ಟರ್ಗಳು ಮತ್ತು ಇತರ ಸ್ಫೋಟಕಗಳು ಕಂಡುಬಂದಿವೆ ಎಂದು ರಕ್ಷಣಾ ಪಡೆ ಆರೋಪಿಸಿದೆ.
ಇನ್ನು ಇಷ್ಟು ಮಾತ್ರವಲ್ಲದೇ IDF ತನ್ನ ಪಡೆಗಳು, ಇಸ್ರೇಲ್ನ ಭಯೋತ್ಪಾದನಾ-ವಿರೋಧಿ ಜನರಲ್ ಸೆಕ್ಯುರಿಟಿ ಸರ್ವಿಸ್ ಮತ್ತು ಬಾರ್ಡರ್ ಪೋಲೀಸ್ನ ನೇತೃತ್ವದಲ್ಲಿ 15 ವಾಂಟೆಡ್ ಭಯೋತ್ಪಾದಕರನ್ನು ಕೂಡ ಬಂಧಿಸಿದೆ ಎಂದು ತಿಳಿಸಿದೆ.