ಸಿಂಗಾಪುರ, ಡಿ 14 (DaijiworldNews/SK): ಕೋವಿಡ್-19 ಸಾಂಕ್ರಾಮಿಕ ರೋಗ ಇಡೀ ದೇಶವನ್ನೇ ವ್ಯಾಪಿಸಿದ ಬಳಿಕ ದೇಶದ ಜನರು ಅನೇಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೋವಿಡ್ ರೂಪಾಂತರಗಳ ತ್ವರಿತ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಸಿಂಗಾಪುರ ಸರಕಾರ ಮತ್ತೆ ನಿಯಂತ್ರಣ ಕ್ರಮಗಳನ್ನು ತರಲು ಮುಂದಾಗಿದೆ.
ಪ್ರಸ್ತುತ ಸಿಂಗಾಪುರದಲ್ಲಿ 60 ಪ್ರತಿಶತದಷ್ಟು ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಈ ಕಾರಣದಿಂದ ಸಿಂಗಾಪುರ ಆರೋಗ್ಯ ಸಚಿವಾಲಯವು ಜನರಲ್ಲಿ ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ ಜನರು ಅತ್ತಿತ್ತ ಓಡಾಡುವಾಗ ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸಬೇಕು. ಇದರೊಂದಿಗೆ ವಿಮಾನ ನಿಲ್ದಾಣದಲ್ಲೂ ಹೆಚ್ಚಿನ ಕ್ರಮಗಳನ್ನು ಕೈ ಗೊಂಡಿದ್ದು, ಮೈ ಬಿಸಿಯಿದೆಯೇ ಎಂದು ಚೆಕ್ ಮಾಡಲು ಸ್ಕ್ಯಾನರ್ ಗಳನ್ನು ಕೂಡ ಅಳವಡಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಸಾಂಕ್ರಾಮಿಕ ರೋಗ ಹರಡುವಿಕೆ ಬಗ್ಗೆ ಮಾಹಿತಿ ಹಂಚಿಕೊಂಡ ಆರೋಗ್ಯ ಸಚಿವಾಲಯ ಜನರ ವರ್ಷಾಂತ್ಯದ ಪ್ರಯಾಣ ಮತ್ತು ಹಬ್ಬದ ದಿನಗಳಲ್ಲಿನ ಓಡಾಟ ಹಾಗೂ ಸಮುದಾಯ ಸಂವಹನಗಳು ಸೇರಿದಂತೆ ಹಲವಾರು ಅಂಶಗಳಿಂದ ಹೆಚ್ಚಿನ ಮಟ್ಟದಲ್ಲಿ ಪ್ರಕರಣಗಳು ದಾಖಲಾಗಿದೆ.
ಹೀಗಾಗಿ ಕೋವಿಡ್ ಲಕ್ಷಣಗಳಾದ ಜ್ವರ, ನ್ಯುಮೋನಿಯಾ ಮತ್ತು ಇತರ ಉಸಿರಾಟದ ರೋಗಕಾರಕಗಳಂತಹ ವಿವಿಧ ರೋಗಾಣುಗಳನ್ನು ನಿಯಂತ್ರಿಸುವ ಗುರಿಯನ್ನು ಸರ್ಕಾರ ಹೊಂದಿವೆ ಎಂದು ಮಾಹಿತಿ ನೀಡಿದೆ.