ಶೀನಗರ, ಡಿ 18 (DaijiworldNews/SK): ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನ ಲೇಹ್ ಪ್ರದೇಶದಲ್ಲಿ ಇಂದು ಭೂಕಂಪವಾಗಿದ್ದು, ರಿಕ್ಟರ್ ಮಾಪನದಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಭೂಕಂಪನದ ಘಟನೆಯು ಮಧ್ಯಾಹ್ನ 3:48 ಕ್ಕೆ ಸಂಭವಿಸಿದ್ದು, ಭೂಮಿಯ ಮೇಲ್ಮೈಯಿಂದ 10 ಕಿ. ಮೀ ಅಳದಲ್ಲಿ ಭೂಮಿ ಕಂಪಿಸಿದೆ. ಈ ಪ್ರದೇಶದಲ್ಲಿ ನಡೆದ ಭೂಕಂಪದಿಂದ ಯಾವುದೇ ಜೀವ ಅಥವಾ ಆಸ್ತಿ ಹಾನಿಯಾಗಿಲ್ಲ ಎಂದು ಎನ್ಸಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ದೇಶದಲ್ಲಿ ಭೂಕಂಪ ಮೇಲ್ವಿಚಾರಣೆಗಾಗಿ ನೋಡಲ್ ಕೇಂದ್ರೀಯ ಸಂಸ್ಥೆಯನ್ನು ಕೂಡ ರಚಿಸಲಾಗಿದೆ ಎಂದು ತಿಳಿದು ಬಂದಿದೆ.