ವಾಷಿಂಗ್ಟನ್, ಡಿ 20 (DaijiworldNews/AK): ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧಿಸಲು ಚಿಂತಿಸಿದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಕ್ ಕೊಟ್ಟಿದೆ. ಸ್ಪರ್ಧೆಯಿಂದ ಕೊಲೊರಾಡೋ ಕೋರ್ಟ್ ಅನರ್ಹಗೊಳಿಸಿದೆ.
ಕ್ಯಾಪಿಟಲ್ ಹಿಲ್ ದಂಗೆಯಲ್ಲಿ ಟ್ರಂಪ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ಆದೇಶ ಪ್ರಕಟಿಸಿದೆ. ಅಲ್ಲದೇ ಈ ಆದೇಶವನ್ನು ಪ್ರಶ್ನಿಸಲು ಜ.4ರವರೆಗೆ ಮೇಲ್ಮನವಿ ಸಲ್ಲಿಸಲು ಟ್ರಂಪ್ಗೆ ಅವಕಾಶ ನೀಡಲಾಗಿದೆ.
ಅಮೆರಿಕದ ಇತಿಹಾಸದಲ್ಲಿ ಮಾಜಿ ಅಧ್ಯಕ್ಷರೊಬ್ಬರನ್ನು ಚುನಾವಣೆಯಿಂದಲೇ ಅನರ್ಹಗೊಳಿಸಿದ್ದು ಇದೇ ಮೊದಲು. ಈ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್ ವಕ್ತಾರರು, ಇದೊಂದು ಸಂಪೂರ್ಣ ದೋಷಪೂರಿತ ಆದೇಶ. ಈ ತೀರ್ಪನ್ನು ಪ್ರಶ್ನಿಸಿ ಅಮೆರಿಕ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.
2021ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಭಾಷಣದಿಂದ ಪ್ರಭಾವಿತರಾಗಿ 2 ಸಾವಿರಕ್ಕೂ ಹೆಚ್ಚು ಟ್ರಂಪ್ ಬೆಂಬಲಿಗರು ಜನವರಿ 6 ರಂದು ಅಮೆರಿಕದ ಸಂಸತ್ ಕಟ್ಟಡ ಅಥವಾ ಕ್ಯಾಪಿಟಲ್ ಹಿಲ್ ಮೇಲೆ ನುಗ್ಗಿ ದಾಂಧಲೆ ನಡೆಸಿದ್ದರು.
ಈ ಸಂಬಂಧ ವಾಷಿಂಗ್ಟನ್ನಲ್ಲಿ 15 ದಿನ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಈ ಹಿನ್ನಲೆ ಟ್ರಂಪ್ ವಿರುದ್ಧ ಕೇಸ್ ದಾಖಲಾಗಿತ್ತು.