ಕೀವ್, ಡಿ 29 (DaijiworldNews/SK): ಉಕ್ರೇನ್ ಮೇಲೆ ರಷ್ಯಾ ಮತ್ತೆ ಭಾರಿ ಪ್ರಮಾಣದಲ್ಲಿ ದಾಳಿ ನಡೆಸಿದ್ದು, 158 ಡ್ರೋನ್ಗಳು ಸೇರಿದಂತೆ ಹಲವು ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಉಕ್ರೇನ್ ಸೇನೆ ತಿಳಿಸಿದೆ.
ರಷ್ಯಾ ಪ್ರಮುಖವಾಗಿ ಉಕ್ರೇನ್ನ ನಿರ್ಣಾಯಕ ಮೂಲಸೌಕರ್ಯ, ಕೈಗಾರಿಕೆ ಮತ್ತು ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದೆ. ರಷ್ಯಾ ವಾಯು ಮತ್ತು ಜಲ ಮಾರ್ಗಗಳ ಮೂಲಕ ಕ್ಷಿಪಣಿ ದಾಳಿ ನಡೆಸುತ್ತಿದ್ದು, ಇದ್ದರಿಂದ ರಾಜಧಾನಿ ಕೀವ್ ಸೇರಿದಂತೆ ಉಕ್ರೇನ್ ನ ಹಲವು ಪ್ರದೇಶಗಳಿಗೆ ಹಾನಿ ಉಂಟಾಗಿದೆ. ಇನ್ನು ಜನರು ಎಚ್ಚರಿಕೆಯಿಂದ ಇರಬೇಕೆಂದು ಎಂದು ಉಕ್ರೇನ್ ಸೈನ್ಯ ಆದೇಶ ಹೊರಡಿಸಿದೆ.
ಇನ್ನು ಇದರ ಪ್ರತೀಕಾರವಾಗಿ ದಾಳಿ ನಡೆಸಿದ ಉಕ್ರೇನ್ ಪಡೆಗಳು ರಷ್ಯಾದ 27 ಡ್ರೋನ್ಗಳು ಮತ್ತು 87 ಕ್ರೂಸ್ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್ನ ಸೇನಾ ಮುಖ್ಯಸ್ಥರು ಟೆಲಿಗ್ರಾಂ ಸಂದೇಶದ ಮೂಲಕ ತಿಳಿಸಿದ್ದಾರೆ.