ಇಸ್ಲಾಮಾಬಾದ್, ಡಿ 31 (DaijiworldNews/MR): ತೋಷಾಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ಜೈಲುಪಾಲಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪಾಕಿಸ್ತಾನ ಚುನಾವಣೆ ಆಯೋಗ ಶಾಕ್ ನೀಡಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಇಮ್ರಾನ್ ಖಾನ್ ಅವರು 2024ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸವಂತಿಲ್ಲ ಎಂದು ಪಾಕಿಸ್ತಾನ ಚುನಾವಣೆ ಆಯೋಗ ಹೇಳಿದೆ. ಇಮ್ರಾನ್ ಖಾನ್ ಅವರು ಸಲ್ಲಿಸಿದ ನಾಮನಿರ್ದೇಶನಗಳನ್ನು ಪಾಕ್ ಚುನಾವಣೆ ಆಯೋಗವು ನಿರಾಕರಿಸಿದೆ.
ಇಮ್ರಾನ್ ಖಾನ್ ಅವರು ಲಾಹೋರ್ ಹಾಗೂ ಮೈನ್ವಾಲಿ ಕ್ಷೇತ್ರಗಳಿಂದ ಸ್ಪರ್ಧಿಸಲು ನಾಮನಿರ್ದೇಶನ ಪತ್ರಗಳನ್ನು ಸಲ್ಲಿಸಿದ್ದರು. ಆದರೆ, ಇವರ ಉಮೇದುವಾರಿಕೆಯನ್ನು ಪಾಕಿಸ್ತಾನ ಚುನಾವಣೆ ಆಯೋಗದ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ ತೋಷಾಖಾನಾ (ಖಜಾನೆ)ಗೆ ಸೇರಬೇಕಾದ ಉಡುಗೊರೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದ್ದ ಪ್ರಕರಣದಲ್ಲಿ, ಅವರಿಗೆ ಇಸ್ಲಾಮಾಬಾದ್ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದರಿಂದಾಗಿ ಇಮ್ರಾನ್ ಖಾನ್ ಅವರ ಸಂಸದ ಸ್ಥಾನವು ರದ್ದಾಗಿದೆ.