ಬಾಂಗ್ಲಾದೇಶ, ಜ 06 (DaijiworldNews/PC):ಬಾಂಗ್ಲಾದೇಶದ ಬೆನಾಪೋಲ್ ರೈಲಿನ ನಾಲ್ಕು ಭೋಗಿಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಐವರು ಮೃತಪಟ್ಟು ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಜ. 5ರಂದು ರಾತ್ರಿ ರೈಲು ಜೆಸ್ಸೋರ್ನಿಂದ ಢಾಕಾಕ್ಕೆ ತೆರಳುತ್ತಿತ್ತು.ಸಯಿದಾಬಾದ್ನ ಗೋಲಬಾಗ್ ಪ್ರದೇಶಕ್ಕೆ ತಲುಪಿದಾಗ ಬೆಂಕಿ ಹೊತ್ತಿಕೊಂಡಿದೆ. ರೈಲಿನಲ್ಲಿ ಭಾರತೀಯ ಪ್ರಜೆಗಳೂ ಪ್ರಯಾಣಿಸುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ.
ಬೆಂಕಿ ತಗುಲಿದ ಬಳಿಕ ಪ್ಯಾಸೆಂಜರ್ ರೈಲಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸುತ್ತಿದ್ದ ವೇಳೆ ಓರ್ವ ಯುವಕ ಮೃತಪಟ್ಟಿದ್ದು. ರೈಲಿನ ಕನಿಷ್ಠ ನಾಲ್ಕು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಅಗ್ನಿಶಾಮಕ ಸೇವಾ ಅಧಿಕಾರಿ ರಕ್ಜಿಬುಲ್ ಹಸನ್ ಹೇಳಿದ್ದಾರೆ.
ಜ.07 ರಂದು ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಈ ಘಟನೆಯನ್ನು ಅಲ್ಲಿನ ವಿರೋಧ ಪಕ್ಷಗಳು ವಿರೋದಿಸಿವೆ. ಈ ಘಟನೆಯ ಹಿಂದೆ ಹಿಂದೂ ಪಕ್ಷಗಳ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ.