ಜಪಾನ್, ಜ 9 ( DaijiworldNews/SK): ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಜಪಾನ್ನಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಆದರೆ ಇದೀಗ ಮತ್ತೆ ಜಪಾನ್ ನ ಕರಾವಳಿ ನಗರವಾದ ವಾಜಿಮಾದಲ್ಲಿ ಮಂಗಳವಾರ ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 6.0 ದಾಖಲಾಗಿದ್ದು, ೨೦೦ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವರದಿಯ ಪ್ರಕಾರ, ಕೇಂದ್ರಬಿಂದುವಾಗಿರುವ ವಾಜಿಮಾ ನಗರದ ಮಧ್ಯಭಾಗದಲ್ಲಿ ಸಂಭವಿಸಿದ ಭೂಕಂಪನದಿಂದ ಸೃಷ್ಠಿಯಾದ ಭಾರಿ ಪ್ರಮಾಣದ ಬೆಂಕಿಯು 48,000 ಚದರ ಮೀಟರ್ ಪ್ರದೇಶದಲ್ಲಿ ಬಹುತೇಕ ಕಟ್ಟಡಗಳನ್ನು ನಾಶಪಡಿಸಿದೆ.
ಇನ್ನು ಪ್ರಬಲ ಭೂಕಂಪನದಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿರುವುದರಿಂದ ಒಟ್ಟಾರೆ ಸಾವಿನ ಸಂಖ್ಯೆ 200 ಕ್ಕಿಂತ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಪ್ರಬಲ ಭೂಕಂಪ ಸಂಭವಿಸಿದರು ಜಪಾನ್ನ ಹವಾಮಾನ ಸಂಸ್ಥೆ ಯಾವುದೇ ಸುನಾಮಿ ಎಚ್ಚರಿಕೆ ನೀಡಿಲ್ಲ ಎಂದು ತಿಳಿದು ಬಂದಿದೆ.