ಕೀವ್, ಜ 12(DaijiworldNews/SK): ಉಕ್ರೇನ್ ಮತ್ತು ರಷ್ಯಾದ ನಡುವೆ ಯುದ್ದ ಆರಂಭವಾಗಿ ವರ್ಷವೇ ಕಳೆದಿದೆ. ಯುದ್ಧದ ಉದ್ವಿಗ್ನ ಪರಿಸ್ಥಿತಿಯಲ್ಲಿ ಉಕ್ರೇನ ನೆರವಿಗೆ ಹಲವು ನೆರ ರಾಷ್ಟಗಳು ಕೂಡ ನೆರವಿಗೆ ಬಂದಿದ್ದವು. ಆದರೆ ಇದೀಗಾ ರಷ್ಯಾ ಜತೆಗಿನ ಯುದ್ಧದಲ್ಲಿ ಉಕ್ರೇನ್ಗೆ ಮತ್ತಷ್ಟು ಸೇನಾ ನೆರವು ಬ್ರಿಟನ್ ಮುಂದಾಗಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಕಚೇರಿಯು ವರದಿ ಮೂಲಕ ತಿಳಿದು ಬಂದಿದೆ.
ಈ ಬಗ್ಗೆ ವರದಿ ಮಾಡಿದ ಸುನಕ್ ಕಚೇರಿಯು, ಮುಂದಿನ ಹಣಕಾಸು ವರ್ಷದಲ್ಲಿ ಉಕ್ರೇನ್ಗೆ 26,537 ಕೋಟಿ ಸೇನಾ ನೆರವಿನ ನಿಧಿಯನ್ನು ನೀಡುವುದರ ಜೊತೆಗೆ ಹೊಸ ಪ್ಯಾಕೇಜ್ ಘೋಷಿಸುವ ನಿರೀಕ್ಷೆಯಿದೆ. ಈ ಪ್ಯಾಕೆಜ್ ನಲ್ಲಿ ದೂರ ವ್ಯಾಪ್ತಿಯ ಕ್ಷಿಪಣಿಗಳು, ವಾಯು ರಕ್ಷಣಾ ವ್ಯವಸ್ಥೆ, ಫಿರಂಗಿ ಮದ್ದುಗುಂಡುಗಳು ಮತ್ತು ಸಾಗರ ಭದ್ರತೆ ಒಳಗೊಂಡಿರಲಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಬ್ರಿಟನ್ ಉಕ್ರೇನ್ನ ಪ್ರಬಲ ಬೆಂಬಲಿಗ ರಾಷ್ಟ್ರವಾಗಿದೆ. ಯುದ್ಧ ಕಾಲದಲ್ಲಿ ಉಕ್ರೇನ್ಗೆ ಅತಿ ಹೆಚ್ಚಿನ ಸೇನಾ ನೆರವು ಮತ್ತು ಆರ್ಥಿಕ ನೆರವು ನೀಡಿದ ರಾಷ್ಟ್ರಗಳಲ್ಲಿ ಅಮೆರಿಕದ ನಂತರದ ಸ್ಥಾನದಲ್ಲಿ ಬ್ರಿಟನ್ ಇದೆ. ನಾವು ಉಕ್ರೇನ್ನ ಕಷ್ಟಕಾಲದಲ್ಲೂ ಅದರ ಬೆಂಬಲಕ್ಕೆ ನಿಂತಿದ್ದೇವೆ. ಉಕ್ರೇನ್ನ ಭದ್ರತೆಯು ನಮ್ಮ ಭದ್ರತೆಯಾಗಿ ಗಣನೆಗೆ ತೆಗೆದುಕೊಂಡಿದ್ದೇವೆ ಎಂದು ವರದಿ ತಿಳಿಸಿವೆ.