ದುಬೈ,ಜ 12(DaijiworldNews/SK): ಯೆಮೆನ್ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರ ನೆಲೆಗಳ ಮೇಲೆ ಅಮೆರಿಕ ಮತ್ತು ಬ್ರಿಟನ್ ಸೇನೆಗಳು ವೈಮಾನಿಕ ದಾಳಿ ನಡೆಸಿವೆ.ಈ ದಾಳಿಯಲ್ಲಿ ಕನಿಷ್ಠ 5 ಮಂದಿ ಸಾವಿಗೀಡಾಗಿದ್ದು, 6 ಮಂದಿ ಗಾಯಗೊಂಡಿದ್ದಾರೆ ಎಂದು ಬ್ರಿಗೇಡಿಯರ್ ಜನರಲ್ ಯಾಹ್ಯಾ ಸ್ಯಾರಿ ಇಂದು ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಬ್ರಿಗೇಡಿಯರ್ ಜನರಲ್, ಯೆಮೆನ್ ಜನರ ವಿರುದ್ಧದ ತಮ್ಮ ಈ ದಾಳಿಯ ಸಂಪೂರ್ಣ ಜವಾಬ್ದಾರಿಯನ್ನು ಅಮೆರಿಕ ಮತ್ತು ಬ್ರಿಟನ್ ಶತ್ರುಗಳು ಹೊರಬೇಕಾಗುತ್ತದೆ. ಅದಕ್ಕಾಗಿ ಅವರು ಉತ್ತರ ನೀಡಬೇಕಾಗುತ್ತದೆ ಮತ್ತು ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ ಎಂದು ಸ್ಯಾರಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ದಾಳಿಯಿಂದಾಗಿ ಹೌತಿಗಳ ಹತೋಟಿಯಲ್ಲಿರುವ ಯೆಮೆನ್ನ ಐದು ಪ್ರದೇಶಗಳ ಮೇಲೆ 73 ದಾಳಿಗಳು ನಡೆದಿವೆ. ಆದರೆ ಅಮೆರಿಕ ಮತ್ತು ಬ್ರಿಟನ್ ಸೇನೆಗಳು ವೈಮಾನಿಕ ದಾಳಿಯ ನಿಲುವು ಎನ್ನಾಗಿತ್ತು ಎಂಬುದರ ಖಚಿತ ಮಾಹಿತಿಯನ್ನು ಹೌತಿ ಬಂಡುಕೋರರ ಮಿಲಿಟರಿ ವಕ್ತಾರ ತಿಳಿಸಿಲ್ಲ.