ಹೆನಾನ್, ಜ 13 (DaijiworldNews/ AK): ಚೀನಾದ ಹೆನಾನ್ ಪ್ರಾಂತ್ಯದ ಪಿಂಗ್ಡಿಂಗ್ಶಾನ್ ನಗರದ ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ಅನಿಲ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 8 ಜನರು ಮೃತಪಟ್ಟಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಪಿಂ ಗ್ಡಿಂ ಗ್ಶಾನ್ ಟಿಯಾನನ್ ಕಲ್ಲಿದ್ದಲು ಗಣಿ ಕಂಪನಿ, ಲಿಮಿಟೆಡ್ ಗಣಿಯಲ್ಲಿ ನಿನ್ನೆ ಮಧ್ಯಾಹ್ನ 2:55ಕ್ಕೆ ಘಟನೆ ನಡೆದಿದೆ. ಈ ವೇಳೆ ಒಟ್ಟು 425 ಜನರು ಇದ್ದರು. ಅವರಲ್ಲಿ 380 ಮಂದಿಯನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಉಳಿದ 45 ಮಂದಿ ನಾಪತ್ತೆಯಾಗಿದ್ದಾರೆ ಎಂದು ತುರ್ತು ನಿರ್ವಹಣಾ ಏಜೆನ್ಸಿಯನ್ನು ಉಲ್ಲೇಖಿಸಿ ಕ್ಸಿನ್ಹುವಾ ವರದಿ ಮಾಡಿದೆ.
ಬಳಿಕ ತಡರಾತ್ರಿ 1 ಗಂಟೆಗೆ ನಾಪತ್ತೆಯಾದ 45 ಕಾರ್ಮಿಕರಲ್ಲಿ 8 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕಾರ್ಯಚರಣೆ ಮುಂದುವರಿದಿದೆ.