ಕಂಪಾಲಾ, ಜ 19 (DaijiworldNews/MS): ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಜೈಶಂಕರ್ ಎಸ್ ಅವರನ್ನು ಗುರುವಾರ ಮಾಲ್ಡೀವ್ಸ್ ಸಚಿವ ಮೂಸಾ ಜಮೀರ್ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರು, ಉಭಯ ದೇಶಗಳ ನಡುವಿನ ಬಾಂಧವ್ಯದ ಕುರಿತು ನೇರ ಮಾತುಕತೆ ನಡೆಸಿದ್ದಾರೆ.
ಉಗಾಂಡಾದ ರಾಜಧಾನಿ ಕಂಪಾಲಾದಲ್ಲಿ ಎಸ್ ಜೈಶಂಕರ್ ಮತ್ತು ಮೂಸಾ ಜಮೀರ್ ಸಭೆಯು ನಡುವೆ ಭೇಟಿಯಾದರು. ಶುಕ್ರವಾರದಿಂದ ಪ್ರಾರಂಭವಾಗುವ ಅಲಿಪ್ತ ಚಳವಳಿಯ (NAM) ಎರಡು ದಿನಗಳ ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಶ್ರೀ ಜೈಶಂಕರ್ ಕಂಪಾಲಾದಲ್ಲಿದ್ದಾರೆ.
ಇಂದು ಮಾಲ್ಡೀವ್ಸ್ ಸಚಿವ ಮೂಸಾ ಜಮೀರ್ ಅವರನ್ನು ಕಂಪಾಲಾದಲ್ಲಿ ಭೇಟಿಯಾದೆನು. ಭಾರತ-ಮಾಲ್ಡೀವ್ಸ್ ಸಂಬಂಧಗಳ ಕುರಿತು ಒಂದು ಸ್ಪಷ್ಟವಾದ ಸಂಭಾಷಣೆ ನಡೆಸಲಾಗಿದ್ದು NAM ಸಂಬಂಧಿತ ವಿಷಯಗಳ ಬಗ್ಗೆಯೂ ಚರ್ಚಿಸಲಾಗಿದೆ" ಎಂದು ಜೈಶಂಕರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಸಭೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.
ಭಾರತೀಯ ಸೇನಾ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವ ಕುರಿತು ನಡೆಯುತ್ತಿರುವ ಉನ್ನತ ಮಟ್ಟದ ಚರ್ಚೆಗಳ ಕುರಿತು ನಾವು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ ಎಂದು ಜಮ್ಮರ್ ಬರೆದುಕೊಂಡಿದ್ದಾರೆ.