ಅರೇಬಿಯನ್, ಜ 29 (DaijiworldNews/HR): ಇರಾನ್ ಹಡಗನ್ನು ಅರೇಬಿಯನ್ ಸಮುದ್ರದಲ್ಲಿ ಸೊಮಾಲಿ ಕಡಲ್ ಕಳ್ಳರು ಮತ್ತೆ ಅಪಹರಿಸಿದ್ದಾರೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.
ಕೊಚ್ಚಿಯಿಂದ ಪಶ್ಚಿಮಕ್ಕೆ 700 ನಾಟಿಕಲ್ ಮೈಲಿ ದೂರದಲ್ಲಿ ಇರಾನಿನ ಮೀನುಗಾರಿಕಾ ಹಡಗನ್ನು ಸೊಮಾಲಿ ಕಡಲ್ ಕಳ್ಳರು ಅಪಹರಿಸಿದ್ದಾರೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಭಾರತೀಯ ನೌಕಾಪಡೆಯು ತನ್ನ ಯುದ್ಧನೌಕೆಯನ್ನು ಹಡಗಿನ ರಕ್ಷಣೆಯಲ್ಲಿ ಇರಿಸಿ ದರೋಡೆಕೋರರ ವಶದಿಂದ ಮುಕ್ತಗೊಳಿಸಿದೆ.
ಎಂವಿ ಇಮಾನ್ ಎಂಬ ಹಡಗಿನಲ್ಲಿ 17 ಸಿಬ್ಬಂದಿ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.