ಕಚಿನ್,ಏ 24 (Daijiworld News/MSP): ಉತ್ತರ ಮ್ಯಾನ್ಮಾರ್ನ ಹೊರವಲಯದ ಕಚಿನ್ ಪ್ರದೇಶದಲ್ಲಿ ಹರಳು ಗಣಿಯೊಂದರ ಬಳಿ ಸಂಭವಿಸಿದ ಭೂಕುಸಿತ ಸಂಭವಿಸಿ 50 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಭೂಕುಸಿತದ ಪರಿಣಾಮ ಕೆಸರು ಮಿಶ್ರಿತ ದೊಡ್ಡ ಹೊಂಡವೊಂದು ನಿರ್ಮಾಣವಾಗಿದ್ದು, ಅದರಲ್ಲಿ ಸುಮಾರು 40ಕ್ಕೂ ಹೆಚ್ಚು ವಾಹನಗಳಲ್ಲಿ ನಿದ್ರಿಸುತ್ತಿದ್ದ ಗಣಿ ಕಾರ್ಮಿಕರು ಅದರೊಳಗೆ ಸಿಲುಕಿ ಜೀವಂತ ಸಮಾಧಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.
ಅವಘಡದ ಬಳಿಕ 50ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದು, ಇವರು ಬದುಕಿ ಉಳಿದಿರುವ ಸಾಧ್ಯತೆ ಕ್ಷೀಣಿಸಿದೆ ಮ್ಯಾನ್ಮಾರ್ ವಾರ್ತಾ ಸಚಿವಾಲಯ ತಿಳಿಸಿದೆ. 2015 ರಿಂದ ಈ ಪ್ರದೇಶದಲ್ಲಿ ಗಣಿ ಕುಸಿತದಲ್ಲಿ 100 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.