ಕೊಲಂಬೋ,ಏ 25(Daijiworld News/MSP): ಈಸ್ಟರ್ ಭಾನುವಾರದಂದು ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದಲ್ಲಿ 359 ಮಂದಿ ಮೃತಪಟ್ಟಿದ್ದು 500 ಹೆಚ್ಚು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಭೀಕರ ಉಗ್ರದಾಳಿಯಿಂದ ಇನ್ನೂ ಚೇತರಿಸಿಕೊಳ್ಳದ ಶ್ರೀಲಂಕಾದಲ್ಲಿ ಮತ್ತೆ ಸ್ಫೋಟದ ಸದ್ದು ಕೇಳಿಸಿದೆ. ರಾಜಧಾನಿ ಕೊಲಂಬೋದ ಹೊರವಲಯದಲ್ಲಿ ಅಂದರೆ 40 ಕಿಮೀ ದೂರದಲ್ಲಿರುವ ಪುಗೋಡಾ ಎಂಬ ನಗರದಲ್ಲಿ ಏ.25 ರ ಗುರುವಾರ ಬೆಳಗ್ಗೆ ಸ್ಫೋಟದ ಸದ್ದು ಕೇಳಿದ್ದು, ಉಗ್ರದಾಳಿಯೇ ಇರಬಹುದು ಎಂದು ಶಂಕಿಸಲಾಗಿದೆ.
ಕಸದ ತೊಟ್ಟಿಯ ಬಳಿ ಈ ಸ್ಫೋಟ ಸಂಭವಿಸಿದ್ದು, ಇಲ್ಲಿ ಜನರು ಓಡಾಡುತ್ತಿಲ್ಲವಾದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂಬ ಕೊಲಂಬೊ ಪೊಲೀಸರು ಮಾಹಿತಿ ನೀಡಿದ್ದಾರೆ.