ಬೈರೂತ್, ಫೆ 15(DaijiworldNews/SK): ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ಪಡೆಯು ವಾಯುದಾಳಿ ನಡೆಸಿದ್ದು, ದಾಳಿಯ ಪರಿಣಾಮ ಲೆಬನಾನ್ ನ 10 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಲೆಬನಾನ್ ನ ಹಿಜ್ಬುಲ್ಲಾ ಬಂಡುಕೋರರ ಪಡೆಯು ಇಸ್ರೇಲ್ ನ ಸಫೇದ್ ಪಟ್ಟಣದ ಮೇಲೆ ಫೆ 14 ರಂದು ದಾಳಿ ನಡೆಸಿತ್ತು. ಈ ಘಟನೆಯಿಂದಾಗಿ ಇಸ್ರೇಲ್ ನ ಯೋಧೆ ಮತ್ತು 8 ಮಂದಿ ಗಾಯಗೊಂಡಿದ್ದರು. ಇದೀಗ ಈ ದಾಳಿಯ ಪ್ರತಿಯಾಗಿ ಇಸ್ರೇಲ್ ಲೆಬನಾನ್ ಮೇಲೆ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ.
ಇನ್ನು ದಾಳಿಯಲ್ಲಿ ಲೆಬನಾನ್ ನ ನಾಬಾತಿಯೇಹ್ ಪಟ್ಟಣದಲಿ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿದ್ದು, ಸೌವಾನೆಹ್ ನಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಹಿಜ್ಬುಲ್ಲಾ ಬಂಡುಕೋರರ ಪಡೆಯು ಇಸ್ರೇಲ್ ವಿರುದ್ದ ಪ್ರತೀಕಾರ ತೀರಿಸಿಕೊಳ್ಳುವುದಾಗಿ ತಿಳಿಸಿದೆ.