ಕೊಲಂಬೊ, ಎ27(Daijiworld News/SS): ಶ್ರೀಲಂಕಾದಲ್ಲಿ ಏಪ್ರಿಲ್ 21ರಂದು ಉಗ್ರರು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 250ಕ್ಕೂ ಹೆಚ್ಚು ಮಂದಿ ಅಮಾಯಕರು ಮೃತಪಟ್ಟಿದ್ದು, ಇದೀಗ ಮತ್ತೆ ಲಂಕಾದ ಮೂರು ಕಡೆ ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಶ್ರೀಲಂಕಾದ ಕಾಲ್ ಮುನೈನಗರದಲ್ಲಿ ಮೂರು ಕಡೆ ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ. ಶ್ರೀಲಂಕಾದಲ್ಲಿ ಮತ್ತೆ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಕುರಿತು ಲಂಕಾ ಸೇನಾ ವಕ್ತಾರರು ಖಚಿತ ಪಡಿಸಿದ್ದಾರೆ.
ಸಮ್ಮಂಥುರೈನಲ್ಲಿ ದಾಳಿ ನಡೆಸಿದ ವೇಳೆ ಇಸ್ಲಾಮಿಕ್ ಸ್ಟೇಟ್ನ ಸಮವಸ್ತ್ರಗಳು,ಐಸಿಸ್ ಧ್ವಜಗಳು,150 ಜಿಲೆಟಿನ್ ಕಡ್ಡಿಗಳು,1,00,000 ಬಾಲ್ಬೇರಿಂಗ್ಗಳು ಮತ್ತು ಒಂದು ಡ್ರೋನ್ ಕ್ಯಾಮರಾವನ್ನು ಶ್ರೀಲಂಕಾ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿಯಲ್ಲಿ ತಿಳಿಸಿದೆ.
ಕಳೆದ ಭಾನುವಾರ ಈಸ್ಟರ್ ಪ್ರಾರ್ಥನೆ ವೇಳೆ ಚರ್ಚ್, ಹೋಟೆಲ್ಗಳಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿತ್ತು. 200ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಬಳಿಕ ದೇಶದ ಬೇರೆ-ಬೇರೆ ಕಡೆ ಬಾಂಬ್ ಸ್ಫೋಟವಾಗಿತ್ತು.