ಮಾಸ್ಕೋ, ಫೆ 16 (DaijiworldNews/AK): ದೀರ್ಘಾ ವಧಿಯ ಶಿಕ್ಷೆಗೆ ಗುರಿಯಾಗಿ ಸೆರೆವಾಸದಲ್ಲಿದ್ದ ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರು ಆರ್ಕ್ಟಿಕ್ ವೃತ್ತದ ಉತ್ತರದಲ್ಲಿರುವ ಪೆನಾಲ್ ಕಾಲೋನಿಯಲ್ಲಿ ಕುಸಿದು ಪ್ರಜ್ಞೆ ಕಳೆದುಕೊಂಡು ನಿಧನರಾಗಿದ್ದರೆ ಎಂದು ರಷ್ಯಾದ ಜೈಲು ಸೇವೆ ವರದಿ ಮಾಡಿದೆ.
ಅಲೆಕ್ಸಿ, ರಷ್ಯಾದ ಅತ್ಯಂತ ಜನಪ್ರಿಯ ವಿಪಕ್ಷ ನಾಯಕ, ಅವರಿಗೆ 47 ಪ್ರಾಯ. ರಷ್ಯಾದಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ವ್ಯಾಪಕ ಟೀಕಿಸಿ ಪ್ರಮಾಣದಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ಮಾಡಿ ಸಮರ ಸಾರಿದ್ದರು.
ಜೈಲು ಸೇವೆಯ ಪ್ರಕಾರ, ನವಲ್ನಿ ಪ್ರಜ್ಞೆ ಕಳೆದುಕೊಂಡ ತಕ್ಷಣವೇ ಸಂಸ್ಥೆಯ ವೈದ್ಯಕೀಯ ಸಿಬಂದಿ ಆಗಮಿಸಿದರು ಮತ್ತು ಜೊತೆಗೆ ಆಂಬ್ಯುಲೆನ್ಸ್ ಕರೆಯಲಾಯಿತು. ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡರು ಜೀವ ಉಳಿಯಲಿಲ್ಲ ಎಂದು ತಿಳಿಸಿದೆ.
ಜರ್ಮನಿಯಿಂದ 2021 ರಲ್ಲಿ ರಷ್ಯಾಕ್ಕೆ ಸ್ವಯಂಪ್ರೇರಣೆಯಿಂದ ಹಿಂದಿರುಗಿದ್ದ ನವಲ್ನಿ, ಆಗಸ್ಟ್ 2020 ರಲ್ಲಿ ಸೈಬೀರಿಯಾದಲ್ಲಿ ವಿಷ ಪ್ರಾಷನ ಮಾಡಿ ಹತ್ಯೆಗೆ ಯತ್ನ ಮಾಡಲಾಗಿದೆ ಎಂದು ಹೇಳಿದ್ದರು.