ಲಾಹೋರ್, ಫೆ 17(DaijiworldNews/AA): ಫೆಬ್ರವರಿ 8ರಂದು ನಡೆದ ಪಾಕಿಸ್ತಾನ ಚುನಾವಣೆಯ ಫಲಿತಾಂಶಗಳನ್ನು ತಿರುಚಲಾಗಿದೆ ಎಂದು ಆರೋಪಿಸಿ ರಾವಲ್ಪಿಂಡಿ ಕಮಿಷನರ್ ಲಿಯಾಖತ್ ಅಲಿ ಚಟ್ಟಾ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನಾವು ಸೋತವರನ್ನು 50,000 ಮತಗಳ ಅಂತರದಿಂದ ವಿಜೇತರನ್ನಾಗಿ ಪರಿವರ್ತನೆ ಮಾಡುತ್ತೇವೆ. ಆತ್ಮಹತ್ಯೆ ಎಂದು ಪರಿಗಣಿಸುವ ಮಟ್ಟಿಗೆ ನಮ್ಮ ಶಕ್ತಿಯನ್ನು ಬಳಸಿಕೊಳ್ಳಲು ಒತ್ತಡಕ್ಕೆ ಒಳಗಾಗಬೇಕಾಗಿ ಬಂತು. ನಾನು ರಾವಲ್ಪಿಂಡಿ ಜನರಿಗೆ ಅನ್ಯಾಯ ಮಾಡಿದ್ದೇನೆ" ಎಂದರು. ಬಳಿಕ ಚಟ್ಟಾ ಅವರು ಪೊಲೀಸರಿಗೆ ಶರಣಾಗಿದ್ದಾರೆ.
ನನ್ನ ವಿಭಾಗದ ಚುನಾವಣಾಧಿಕಾರಿಗಳಲ್ಲಿ ಕ್ಷಮೆ ಕೇಳುತ್ತಿದ್ದೇನೆ. ಎಲ್ಲಾ ರಾಜಕಾರಣಿಗಳು ಯಾವುದೇ ತಪ್ಪು ಮಾಡಬಾರದು ಎಂದು ಇಡೀ ಅಧಿಕಾರಿಗಳಲ್ಲಿ ನನ್ನ ವಿನಂತಿ ಎಂದು ಅವರು ಹೇಳಿದ್ದಾರೆ. ಇನ್ನು ಚಟ್ಟಾ ಅವರ ಹೇಳಿಕೆಗೆ ಪ್ರತಿಯಾಗಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) "ರಾವಲ್ಪಿಂಡಿ ಆಯುಕ್ತರ ಈ ಹೇಳಿಕೆಯ ನಂತರ ಮುಖ್ಯ ಚುನಾವಣಾ ಆಯುಕ್ತರು ತಕ್ಷಣವೇ ರಾಜೀನಾಮೆ ನೀಡಬೇಕು” ಎಂದು ಸೂಚಿಸಿದೆ.