ಆಸ್ಟ್ರೇಲಿಯಾ, ಫೆ 18(DaijiworldNews/SK): ಆಸ್ಟ್ರೇಲಿಯಾದ ರಾಜಕಾರಣಿ ಅಧಿಕಾರಿಗಳು ಭಾರತೀಯ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅಸೂಯೆ ಪಡುತ್ತಿದ್ದಾರೆ ಎಂದು ಆಸ್ಟ್ರೇಲಿಯಾದ ವಿರೋಧ ಪಕ್ಷ ನಾಯಕ ಪೀಟರ್ ಡಟ್ಟನ್ ತಿಳಿಸಿದ್ದಾರೆ.
ಸಿಡ್ನಿಯಲ್ಲಿ ನಡೆದ ಮೋದಿಯವರ ಕಾರ್ಯಕ್ರಮವೊಂದರಲ್ಲಿ ಭಾರಿ ಪ್ರಮಾಣದ ಜನ ಸೇರಿದ್ದನ್ನು ಉಲ್ಲೇಖಿಸಿ ಆಸ್ಟ್ರೇಲಿಯಾ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ ಪೀಟರ್ ಡಟ್ಟನ್ ಅವರು, ಇಡೀ ವಿಶ್ವದಲ್ಲಿ 20 ಸಾವಿರ ಜನರನ್ನು ಒಂದುಗೂಡಿಸಿ ಮೋದಿ-ಮೋದಿ ಎಂಬ ಘೋಷಣೆಗಳನ್ನು ಕೂಗುವಂತೆ ಮಾಡುವ ಪ್ರಬಲವಾದ ಸಾಮರ್ಥ್ಯ ನಮ್ಮ ಯಾವ ಅಧಿಕಾರಿಗಳಲ್ಲೋ ಇಲ್ಲ ಎಂದು ತಿಳಿಸಿದ್ದಾರೆ.
ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧಗಳು ಅತ್ಯಂತ ಪ್ರಭಾಲವಾಗಿತ್ತು. ಇನ್ನು ಪ್ರಧಾನಿ ಮೋದಿ ಸಿಡ್ನಿ ತಲುಪಿದಾಗ ಎನ್ಆರ್ಐ ಸಮುದಾಯದ ಜನರು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು, ಈ ಸಂದರ್ಭದಲ್ಲಿ ಜನರು ‘ಭಾರತ್ ಮಾತಾ ಕಿ ಜೈ’, ‘ವಂದೇ ಮಾತರಂ’ ಮತ್ತು ‘ಮೋದಿ-ಮೋದಿ’ ಎಂದು ಘೋಷಣೆ ಮಾಡಿದ್ದಾರೆ ಇದನ್ನು ನಾನು ಎಂದಿಗೂ ಮರೆಯುದಿಲ್ಲ ಎಂದಿದ್ದಾರೆ.