ಕೊಲಂಬೋ, ಎ28(Daijiworld News/SS): ಉಗ್ರ ದಾಳಿಯಿಂದ ತತ್ತರಿಸುವ ಶ್ರೀಲಂಕಾ ಎಚ್ಚೆತ್ತುಕೊಂಡಿದ್ದು, ಇದೀಗ ಇಲ್ಲಿನ ಸರಕಾರ, ಭಯೋತ್ಪಾದಕರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಎರಡು ಉಗ್ರ ಸಂಘಟನೆಗಳ ಮೇಲೆ ನಿಷೇಧ ಹೇರಿದೆ.
ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ದಿ ನ್ಯಾಷನಲ್ ತವ್ಹೀದ್ ಜಮಾತ್ (ಜಿಎನ್ಟಿ) ಮತ್ತು ಜಮಾತಿ ಮಿಲ್ಲಾಥು ಇಬ್ರಾಹಿಂ (ಜೆಎಂಐ) ಉಗ್ರ ಸಂಘಟನೆಗಳ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ.
ಬಟ್ಟಿಕಲೋವಾ ಪಟ್ಟಣದ ದಕ್ಷಿಣಕ್ಕಿರುವ ಅಂಪಾರಾದ ಸೈಂತಾಮರುತುವಿನಲ್ಲಿ ಶಂಕಿತ ಇಸ್ಲಾಮಿಕ್ ಉಗ್ರರು ಮತ್ತು ಸೇನಾ ಯೋಧರ ನಡುವೆ ಗುಂಡಿನ ಕಾಳಗ ಆರಂಭವಾಗಿದ್ದು, ಗುಂಡಿನ ಕಾಳಗದಲ್ಲಿ ಮೃತಪಟ್ಟ 15 ಮಂದಿಯಲ್ಲಿ ಮೂವರು ಶಂಕಿತ ಉಗ್ರರೂ ಸೇರಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಲಂಕಾದ ಮೇಲೆ ಈ ಹಿಂದೆಯೇ ದಾಳಿಯಾಗುವ ಕುರಿತು ಮಾಹಿತಿ ಇದ್ದರೂ, ಉಗ್ರರ ದಾಳಿ ವಿಷಯದಲ್ಲಿ ಗುಪ್ತಚರ ಇಲಾಖೆ ವೈಫಲ್ಯತೆ ತೋರಿಸಿರುವ ಕಾರಣ ಶ್ರೀಲಂಕಾ ಸರಕಾರ ಕ್ಷಮೆಯಾಚಿಸಿದೆ.