ಜೆರುಸಲೇಂ, ಮಾ 05(DaijiworlNews/AK): ಇಸ್ರೇಲ್ ನ ಉತ್ತರ ಗಡಿಯಾದ ಮಾರ್ಗಲಿಯೋಟ್ ಸಮೀಪದ ಹಣ್ಣಿನ ತೋಟವನ್ನು ಗುರಿಯಾಗಿರಿಸಿಕೊಂಡು ಲೆಬನಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂವರು ಕೇರಳ ರಾಜ್ಯಕ್ಕೆ ಸೇರಿದವರಾಗಿದ್ದಾರೆ. ಸೋಮವಾರ ಬೆಳಗ್ಗೆ 11ಗಂಟೆಗೆ ಇಸ್ರೇ ಲ್ ನ ಉತ್ತರದ ಗಲಿಲಿ ಪ್ರದೇಶದಲ್ಲಿ ಮೋಶಾವ್ ಎಂಬ ತೋಟದ ಮೇಲೆ ಕ್ಷಿಪಣಿ ದಾಳಿ ನಡೆದಿರುವುದಾಗಿ ರಕ್ಷಣಾ ಸೇವೆಗಳ ವಕ್ತಾರ ಮ್ಯಾಗೆನ್ ಡೇವಿಡ್ ಆಡಮ್ ಝಕಿ ಹೆಲ್ಲರ್ ಪಿಟಿಐಗೆ ತಿ ಮಾಹಿತಿ ನೀಡಿದ್ದಾರೆ.ಕ್ಷಿಪಣಿ ದಾಳಿಯಲ್ಲಿ ಕೇರಳದ ಕೊಲ್ಲಂ ಮೂಲದ ಪಟ್ನಿಬಿನ್ ಮ್ಯಾಕ್ಸ್ ವೆಲ್ ಸಾವನ್ನಪ್ಪಿದ್ದು, ಝಿವ್ ಆಸ್ಪತ್ರೆಯಲ್ಲಿ ಶವದ ಗುರುತನ್ನು ಪತ್ತೆಹಚ್ಚಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯಲ್ಲಿ ಬುಶ್ ಜೋಸೆಫ್ ಜಾರ್ಜ್ಮತ್ತು ಪೌಲ್ ಮೆಲ್ವಿನ್ ಗಾಯಗೊಂಡಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ವಿವರಿಸಿದೆ.ಜೋಸೆಫ್ ಜಾರ್ಜ್ಅವರನ್ನು ಪೆಟಾಹ್ ಬೆಲಿನ್ ಸನ್ ಆಸ್ಪತ್ರೆಗೆ ದಾಖಲಿಸಿ, ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಜಾರ್ಜ್ತನ್ನ ಕುಟುಂಬ ಸದಸ್ಯರ ಜತೆ ಮೊಬೈಲ್ ನಲ್ಲಿ ಮಾತುಕತೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
ಕೇರಳದ ಇಡುಕ್ಕಿ ಮೂಲದ ಮೆಲ್ವಿನ್ ಅವರು ಝಿವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲೆಬನಾನ್ ನ ಶಿಯಾ ಹೆಜ್ಬುಲ್ಲಾ ಸಂಘಟನೆ ಈ ದಾಳಿ ನಡೆಸಿರುವುದಾಗಿ ವರದಿಯಾಗಿದೆ.