ಟೊಕಿಯೊಮಾ08 (DaijiworldNews/ AK): ವಿಶ್ವದ ದಕ್ಷಿಣ ಭಾಗದ 125 ರಾಷ್ಟ್ರ ಗಳ ಸಮಸ್ಯೆಗಳನ್ನು ಆಲಿಸಲು ಭಾರತ ಆಯೋಜಿಸಿದ್ದ ಎರಡು ಸಭೆಗೆ ಹಾಜರಾಗದ ಚೀನಾಗಿಂತಲೂ ಈ ರಾಷ್ಟ್ರ ಗಳ ನಂಬಿಕೆ ಭಾರತದ ಮೇಲೆ ಹೆಚ್ಚಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈ ಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಜಪಾನ್ ಸ್ನೇ ಹ ಸಂಬಂಧಗಳ ಪ್ರತೀಕವಾದ ನಿಕ್ಕೀ ಒಕ್ಕೂಟದಲ್ಲಿ ಮಾತನಾಡಿದ ಅವರು, ಜಿ20 ಅಧ್ಯಕ್ಷೀಯತೆಯನ್ನು ಭಾರತ ಪಡೆದ ಸಂದರ್ಭ ದಲ್ಲಿ ತಮ್ಮ ಕಾಳಜಿ ಕುರಿತು ಚರ್ಚೆಯೇ ನಡೆಯುವುದಿಲ್ಲ ಎಂದೇ ಈ ರಾಷ್ಟ್ರಗಳು ನಂಬಿದ್ದವು. ಆದರೆ ದಕ್ಷಿಣದ ಈ 125 ರಾಷ್ಟ್ರ ಗಳ ಸಭೆಯನ್ನು ಜಿ20ಕ್ಕಿಂ ತ ಮೊದಲೇ
ಭಾರತ ಆಯೋಜಿಸಿತ್ತು. ಆ ಮೂಲಕ ಈ ದೇ ಶಗಳ ಕಳಕಳಿಯನ್ನು ಜಿ20ರಲ್ಲಿ ಮಂಡಿಸುವ ಉದ್ದೇ ಶ ಭಾರತ ಹೊಂದಿತ್ತು ಎಂದು ಹೇಳಿದ್ದಾರೆ.
ಭಾರತದ ಸ್ವಾತಂತ್ರ್ಯ ನಂತರ, ಸಾಕಷ್ಟು ಆಕ್ರಮಣಗಳನ್ನು ಅನುಭವಿಸಿತು. ನಮ್ಮ ಗಡಿಯನ್ನು ಗುರುತಿಸಿಕೊಳ್ಳಲು ಪ್ರಯಾಸ ಪಡಬೇಕಾಯಿತು.ಹೀಗಿದ್ದರೂ ನಮ್ಮ ದೇಶದ ಒಂದು ಭಾಗವನ್ನು ಮತ್ತೊಂದು ದೇಶ ಈಗಲೂ ಆಕ್ರಮಿಸಿಕೊಂಡಿದೆ. ಆದರೆ ಜಗತ್ತಿನ ಯಾವುದೇ ದೇಶ ಅದರ ಬಗ್ಗೆ ಏನನ್ನೂ ಹೇಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ನಮ್ಮೊಂ ದಿಗೆ ಅನ್ಯಾಯವಾಗಿದೆ. ಆದರೆ ಆ ಅನ್ಯಾಯ ಇತರರಿಗೂ ಆಗಬೇಕೆಂದು ನಾವು ಬಯಸುವುದಿಲ್ಲ.
ಪ್ರಧಾನಮಂತ್ರಿ ಅವರು ರಷ್ಯಾಅಧ್ಯಕ್ಷ ಪುಟಿನ್ ಜೊತೆ ಮಾತುಕತೆ ನಡೆಸಿ,ಯುದ್ಧ ಕೊನೆಗಾಣಿಸಲು ಮನವಿ ಮಾಡಿಕೊಂಡಿದ್ದಾರೆ. ಉಕ್ರೇನ್ನೊಂದಿಗಿನ ಯುದ್ಧದಿಂದಾಗಿಇಂಧನ ಬೆಲೆ ಗಗನಕ್ಕೇ ರಿದೆ. ಆಹಾರ ಸಮಸ್ಯೆ ಎದುರಾಗಿದೆ. ಗೊಬ್ಬರಗಳ ಬೆಲೆಯೂ ದುಬಾರಿಯಾಗಿವೆ. ಶ್ರೀಲಂಕಾ ದೊಡ್ಡ ಆರ್ಥಿಕ ಸಂಕಷ್ಟಕ್ಕೆಸಿಲುಕಿದೆ. ಇಂಥ ಸಂದರ್ಭ ದಲ್ಲಿ ಐಎಂಎಫ್ ನೀ ಡಿದ್ದಕ್ಕಿಂ ತ ಶೇ 50ರಷ್ಟು ಹೆಚ್ಚಿನ ಮೊತ್ತವನ್ನು ಭಾರತ ನೀ ಡಿದೆ’ ಎಂದಿದ್ದಾರೆ.
ದೊಡ್ಡ ಆರ್ಥಿ ಕ ರಾಷ್ಟ್ರ ವಾಗಿ ಬೆಳೆಯುತ್ತಿರುವ ಭಾರತಕ್ಕೆ ಜವಾಬ್ದಾರಿಯೂ ದೊಡ್ಡದಿದೆ. ಜಗತ್ತಿಗೆ ನಾವೇ ನಾದರೂ ಕೊಡುತ್ತಿದ್ದೇ ವೆ ಎಂಬುದಾದರೆ, ಅದರ ಹಿಂದೆ ಭಾರತೀಯರ ದೊಡ್ಡ ಆತ್ಮಸಮರ್ಪಣೆ ಮತ್ತು ಶ್ರಮ ಅಡಗಿರುತ್ತದೆ. ಅಂತರರಾಷ್ಟ್ರೀ ಯ ಬಾಂಧವ್ಯದ ವಿಷಯದಲ್ಲಿ ಭಾರತೀಯರ ನಂಬಿಕೆ ದೊಡ್ಡದು. ಕೋವಿಡ್ ಲಸಿಕೆ ಭಾರತದ ಪ್ರತಿಯೊಬ್ಬರಿಗೆ ನೀಡುವುದು ಪೂರ್ಣಗೊಳ್ಳುವ ಮೊದಲೇ , ಇತರ ರಾಷ್ಟ್ರ ಗಳಿಗೆ ಭಾರತ ಹಂಚಿಕೆ ಮಾಡಿತ್ತು. ಇದು ಜಾಗತಿಕ ದಕ್ಷಿಣಕ್ಕೆ ಭಾರತದ ಕಾಳಜಿ ಎಂದಿದ್ದಾರೆ.