ಮಾಸ್ಕೋ, ಮಾ 12(DaijiworldNews/MS): ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ಮಿಲಿಟರಿ ವಿಮಾನ ಪತನಗೊಂಡ ದುರಂತ ಘಟನೆ ನಡೆದಿದೆ.
15 ಪ್ರಯಾಣಿಕರನ್ನು ಹೊತ್ತ ರಷ್ಯಾದ ಮಿಲಿಟರಿ ಸಾರಿಗೆ ವಿಮಾನ ಪಶ್ಚಿಮ ರಷ್ಯಾದ ವಾಯುನೆಲೆಯಿಂದ ಟೇಕ್ ಆಫ್ ಆಗುವ ವೇಳೆ ಅಪಘಾತಕ್ಕೀಡಾಗಿದೆ.ಮಿಲಿಟರಿ Il-76 ವಿಮಾನದಲ್ಲಿ ಎಂಟು ಸಿಬ್ಬಂದಿ ಮತ್ತು ಏಳು ಪ್ರಯಾಣಿಕರಿದ್ದು, ಮಾಸ್ಕೋದ ಈಶಾನ್ಯದಲ್ಲಿರುವ ಇವಾನೊವೊ ಪ್ರದೇಶದಲ್ಲಿ ವಿಮಾನ ನೆಲಕ್ಕೆ ಅಪ್ಪಳಿಸಿದೆ.
ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಅದಲ್ಲಿ ಭೂಮಿಗೆ ಸನಿಹದಲ್ಲಿ ಹಾರುತ್ತಿರುವ ವಿಮಾನದ ಎಂಜಿನ್ನಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದು ಕಾಣಬಹುದಾಗಿದೆ.
ಇವಾನೊವೊ ನಗರದ ಉತ್ತರಕ್ಕೆ 3.7 ಮೈಲುಗಳಷ್ಟು ದೂರದಲ್ಲಿರುವ ಸೆವೆರ್ನಿ ಏರ್ಫೀಲ್ಡ್ನಿಂದ ಟೇಕ್ಆಫ್ ಆಗುವ ಸಂದರ್ಭದಲ್ಲಿ ಉಂಟಾದ ಎಂಜಿನ್ಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ದುರಂತಕ್ಕೆ ಕಾರಣ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ.
ಘಟನೆಯಲ್ಲಿ ಬದುಕುಳಿದವರ ಬಗ್ಗೆ ಇನ್ನು ಮಾಹಿತಿ ಲಭ್ಯವಾಗಿಲ್ಲ.