ಅಮೇರಿಕಾ , ಮಾ 13(DaijiworldNews/MS): ಈ ವರ್ಷಾಂತ್ಯದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಈಗಲೇ ವೇದಿಕೆ ಸಿದ್ದವಾಗಿದೆ. ಯುಎಸ್ ಪ್ರಸ್ತುತ ಅಧ್ಯಕ್ಷ ಜೋ ಬೈಡನ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪಕ್ಷಗಳ ಅಧ್ಯಕ್ಷೀಯ ನಾಮನಿರ್ದೇಶನವನ್ನು ಗೆದ್ದಿದ್ದು, 2020 ರಲ್ಲಿ ನಡೆದ ಹೋರಾಟದಂತೆ ಈ ಬಾರಿಯೂ ಪ್ರಬಲ ಪೈಪೋಟಿಗೆ ಎರಡು ಪಕ್ಷಗಳು ತಯಾರಾಗಿ ನಿಂತಿದೆ.
ಜೋ ಬೈಡನ್ ಮತ್ತು ಡೊನಾಲ್ಡ್ ಟ್ರಂಪ್ ಅವರು ರಾಜ್ಯಗಳ ಪ್ರಾಥಮಿಕ ಹಂತದ ಚುನಾವಣೆಗಳಲ್ಲಿ ವಿಜೇತರಾಗುವ ಮೂಲಕ ಮೂಲಕ ನವೆಂಬರ್ ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದು , ಈ ಬಗ್ಗೆ ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ.
ಈ ಜುಲೈನಲ್ಲಿ ಮಿಲ್ವಾಕಿಯಲ್ಲಿ ನಡೆಯಲಿರುವ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ಟ್ರಂಪ್ ಅಧಿಕೃತವಾಗಿ ನಾಮನಿರ್ದೇಶನಗೊಳ್ಳಲಿದ್ದಾರೆ. ಇನ್ನು ಆಗಸ್ಟ್ನಲ್ಲಿ ಚಿಕಾಗೋದಲ್ಲಿ ನಡೆಯಲಿರುವ ಡೆಮಾಕ್ರಟಿಕ್ ನ್ಯಾಶನಲ್ ಕನ್ವೆನ್ಶನ್ನಲ್ಲಿ ಜೋ ಬೈಡನ್ ನಾಮನಿರ್ದೇಶನಗೊಳ್ಳುವ ಸಾಧ್ಯತೆ ಇದೆ.
ವಾಷಿಂಗ್ಟ ನ್, ಜಾರ್ಜಿಯಾ, ಮಿಸಿಸಿಪ್ಪಿ ರಾಜ್ಯ ಗಳ ಫಲಿತಾಂಶಹೊರಬಿದ್ದ ಬಳಿಕ ಉಭಯ ನಾಯಕರ ಆಯ್ಕೆ ಖಚಿತಪಟ್ಟಿ ದೆ.್ಡೆಮಾಕ್ರಟಿಕ್ ಪಕ್ಷದ ಬೈಡನ್ ಆಗಲಿ ಅಥವಾ ರಿಪಬ್ಲಿ ಕನ್ ಪಕ್ಷದ ಟ್ರಂಪ್ ಆಗಲಿ ಪ್ರಾಥಮಿಕ ಚುನಾವಣೆಗಳಲ್ಲಿ ದೊಡ್ಡ ವಿರೋಧವನ್ನು ಎದುರಿಸಲಿಲ್ಲ. ಈಗಾಗಲೇ ಎರಡು ಪಕ್ಷದ ನಾಯಕರು ಅಧ್ಯಕ್ಷೀಯ ಚುನಾವಣೆಗೆ ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಳ್ಳಲು ಅಗತ್ಯವಿರುವ ಪ್ರತಿನಿಧಿಗಳ ಬಹುಮತವನ್ನು ಪಡೆದಿದ್ದಾರೆ.
ಒಟ್ಟಾರೆ 2020ರ ಬಳಿಕ ಮತ್ತೊಮ್ಮೆ ಟ್ರಂಪ್ ಮತ್ತು ಜೋ ಬೈಡನ್ ಮುಖಾಮುಖಿಯಾಗುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿದ್ದು, ಅಂದು ನಡೆದ ಚುನಾವಣೆಯಲ್ಲಿ ಬೈಡನ್, ಟ್ರಂಪ್ ಅವರನ್ನು ಸೋಲಿಸಿ ಅಮೇರಿಕ ಅಧ್ಯಕ್ಷ ಸ್ಥಾನಕ್ಕೇರಿದ್ದರು.