ವಾಷಿಂಗ್ಟನ್, ಏ. 25(DaijiworldNews/AA): ರಷ್ಯಾಗೆ ಚೀನಾ, ಇರಾನ್ ಮತ್ತು ಉತ್ತರ ಕೊರಿಯಾ ನೆರವು ನೀಡುತ್ತಿದ್ದು, ಇದೀಗ ಉಕ್ರೇನ್ಗೆ ಅಮೇರಿಕವು ಶಸ್ತ್ರಾಸ್ತ್ರಗಳ ನೆರವು ನೀಡಲು ತಯಾರಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಅಮೇರಿಕ ಅಧ್ಯಕ್ಷ ಜೋ ಬೈಡನ್ ನಾವು ಉಕ್ರೇನ್ಗೆ ಶಸ್ತ್ರಾಸ್ತ್ರಗಳನ್ನು ರವಾನಿಸುತ್ತಿದ್ದೇವೆ. ಪುಟಿನ್ ಅವರ ಸ್ನೇಹಿತರು ಸಾಕಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ರಷ್ಯಾಗೆ ಪೂರೈಸುತ್ತಿದ್ದಾರೆ. ಇರಾನ್ ಡೋನ್ಗಳನ್ನು ಕಳುಹಿಸಿದೆ. ಉತ್ತರ ಕೊರಿಯಾ ಗುರಿ ನಿರ್ದೇಶಿತ ಕ್ಷಿಪಣಿಗಳು ಮತ್ತು ಫಿರಂಗಿಗಳನ್ನು ರಷ್ಯಾಗೆ ಕಳುಹಿಸಿದೆ ಹಾಗೂ ರಕ್ಷಣಾ ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯವಿರುವ ಉಪಕರಣಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ದೇಶಗಳ ಬೆಂಬಲದಿಂದ ಉಕ್ರೇನ್ ನಗರಗಳ ಮೇಲೆ ದಾಳಿಯನ್ನು ರಷ್ಯಾ ತೀವ್ರಗೊಳಿಸಿದೆ. ಹೀಗಾಗಿ, ಈ ದಾಳಿಯನ್ನು ಎದುರಿಸಲು ಉಕ್ರೇನ್ಗೆ ಶಸ್ತ್ರಾಸ್ತ್ರಗಳನ್ನು ಕಳಿಸುತ್ತಿದ್ದೇವೆ ಎಂದರು.