ವಾಷಿಂಗ್ಟನ್, ಮೇ.7(DaijiworldNews/AZM):ಮಾಜಿ ವಕೀಲ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತರಾಗಿದ್ದ ಮೈಕಲ್ ಕೋಹಿನ್ ಗೆ ತೆರಿಗೆ ವಂಚನೆ, ಪ್ರಚಾರದ ಹಣ ದುರ್ಬಳಕೆ ಸೇರಿ ಇತರೆ ಆರೋಪಗಳಿಗೆ ಸಂಬಂಧಿಸಿ ಇಂದಿನಿಂದ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಆಗಲಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಅಟಾರ್ನಿ ಮೈಕಲ್ ಕೋಹಿನ್ ಗೆ ಇಂದಿನಿಂದ ಜೈಲು ಶಿಕ್ಷೆ ಶುರುವಾಗಿದೆ. ಕಳೆದ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಮೈಕಲ್ ಕೋಹಿನ್ ಟ್ರಂಪ್ ಅವರ ಅತ್ಯಾಪ್ತ ವಲಯದಲ್ಲಿ ಇದ್ಧಿದ್ದು,ಪ್ರಚಾರ ತಂಡದ ಪ್ರಮುಖರಾಗಿದ್ದರು.
ಭಾನುವಾರ ಮೈಕಲ್ ರನ್ನು ಜೈಲಿಗೆ ಕರೆತಂದಿದ್ದು,ಜೈಲಿಗೆ ಹೋಗುವ ಮುಂಚೆ ಮಾಧ್ಯಮದೊಂದಿಗೆ ಮಾತನಾಡಿರುವ ಅವರು 'ನಾನು ಹೇಳುವುದು ಸಾಕಷ್ಟಿದೆ, ಭವಿಷ್ಯದಲ್ಲಿ ಎಲ್ಲಾ ಸತ್ಯವನ್ನು ತಿಳಿಸುತ್ತೇನೆ '' ಎಂದು ಹೇಳಿದ್ದಾರೆ. ಈ ಹಿಂದೆ ಚುನಾವಣಾ ಗೆಲುವಿನ ಬಳಿಕ ಅಧ್ಯಕ್ಷ ಟ್ರಂಪ್ಗಾಗಿ ಬುಲೆಟ್ ಸ್ವೀಕರಿಸಲು ತಯಾರಿದ್ದೇನೆ ಎಂದು ಹೇಳಿಕೆ ನೀಡಿದ್ದ ಕೋಹಿನ್ ಈಗ ತಿರುಗಿ ಬಿದ್ದಿದ್ದಾರೆ. ಅಲ್ಲದೆ ನಾನು ಜೈಲು ಶಿಕ್ಷೆ ಮುಗಿಸಿ ಹೊರಗೆ ಬರುವಷ್ಟರಲ್ಲಿ ಅಮೆರಿಕವು ಅನ್ಯಾಯ, ಸುಳ್ಳು ಹಾಗೂ ಭಯದಿಂದ ಮುಕ್ತವಾಗಲಿದೆ ಎನ್ನುವ ವಿಶ್ವಾಸವಿದೆ ಎಂದೂ ಹೇಳಿದ್ದಾರೆ.
2016ರಲ್ಲಿ ಮಾಸ್ಕೋದಲ್ಲಿ ಟ್ರಂಪ್ ಟವರ್ ನಿರ್ಮಿಸಲು ಹಾಗೂ ಅಮೆರಿಕ ಅಧ್ಯಕ್ಷರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಇಬ್ಬರು ಮಹಿಳೆಯರಿಗೆ ಹಣದ ಆಮಿಷ ಒಡ್ಡಿದ ಆರೋಪದಲ್ಲಿ ಅಮೆರಿಕ ಕಾಂಗ್ರೆಸ್ ಗೆ ಸುಳ್ಳು ಹೇಳಿರುವ ಆರೋಪ ಕೋಹಿನ್ ವಿರುದ್ಧ ಸಾಭೀತಾಗಿತ್ತು.
ಕಳೆದ ಜೂನ್ನಲ್ಲಿ ತೆರಿಗೆ ವಂಚನೆ ಪ್ರಕರಣದಲ್ಲಿಯೂ ಈತ ಅಪರಾಧಿ ಎನ್ನುವುದು ಸಾಭೀತಾಗಿದ್ದು, ಈ ಹಿನ್ನಲೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 1.94 ಮಿಲಿಯನ್ ಯುಎಸ್ ಡಾಲರ್ ದಂಡವನ್ನು ವಿಧಿಸಲಾಗಿದೆ.