ದುಬೈ, ಮೇ.12(DaijiworldNews/AA): ಮುಂದಿನ ವರ್ಷದ ಅಂತ್ಯದ ವೇಳೆಗೆ ದುಬೈನಲ್ಲಿ ಆರ್ಟಿಎ ಏರ್ ಟ್ಯಾಕ್ಸಿ ಸೇವೆಯು ಪ್ರಾರಂಭವಾಗಲಿದೆ. ಈ ಮೂಲಕ ದುಬೈ ನಿವಾಸಿಗಳು ಎಮಿರೇಟ್ನ ಪ್ರಮುಖ ನಗರಗಳ ನಡುವೆ ಏರ್ ಟ್ಯಾಕ್ಸಿ ಮೂಲಕ ಚಲಿಸಬಹುದಾಗಿದೆ.
ಯುಎಸ್-ಆಧಾರಿತ ವಿಮಾನಯಾನ ಕಂಪನಿಯು ಈ ಸೇವೆಯನ್ನು ನಿರ್ವಹಿಸುತ್ತದೆ. ಈ ಸೇವೆಯ ಮೂಲಕ ಪ್ರಯಾಣಿಕರು ದುಬೈನ ಸ್ಕೈಲೈನ್ನ ಸುಂದರನೋಟವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಏರ್ ಟ್ಯಾಕ್ಸಿ ಸೇವೆಯಿಂದಾಗಿ ದುಬೈನಲ್ಲಿ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಮತ್ತು ಪ್ರಯಾಣದ ಅವಧಿಯನ್ನು 70ಶೇ. ರಷ್ಟು ಕಡಿತಗೊಳಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಾಮ್ ಜುಮೇರಾಗೆ ಸಾಮಾನ್ಯವಾಗಿ 45 ನಿಮಿಷಗಳು ಬೇಕು. ಹಾಗೂ ರಸ್ತೆ ಮೂಲಕ ಸಾಗುವುದಾದರೆ ಒಂದು ಗಂಟೆ ಬೇಕಾಗುತ್ತದೆ. ಆದರೆ ಏರ್ ಟ್ಯಾಕ್ಸಿ ಮೂಲಕ ಕೇವಲ 10 ರಿಂದ 12 ನಿಮಿಷಗಳಲ್ಲಿ ತಲುಪಬಹುದಾಗಿದೆ.
ಪ್ರಯಾಣದ ದೂರವನ್ನು ಅವಲಂಬಿಸಿ 100 ರಿಂದ 1000 ಮೀಟರ್ ಎತ್ತರದಲ್ಲಿ ಏರ್ ಟ್ಯಾಕ್ಸಿಗಳು ಕಾರ್ಯನಿರ್ವಹಿಸುತ್ತದೆ. ಹಾಗೂ ಏರ್ ಟ್ಯಾಕ್ಸಿಯಲ್ಲಿ ಸುರಕ್ಷತೆ ಮತ್ತು ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ.