ಸಿಂಗಾಪುರ, ಮೇ 24 (DaijiworldNews/ AK): ಮೇ 21ರಂದು ಸಿಂಗಾಪುರ ಏರ್ಲೈನ್ಸ್ ಕಂಪನಿಯ ವಿಮಾನವೊಂದು ಹಿಂದೂ ಮಹಾಸಾಗರದ ಮೇಲೆ ಸಾಗುತ್ತಿದ್ದಾಗ ತೀವ್ರ ಟರ್ಬು ಲೆನ್ಸ್ಗೆ (ಗಾಳಿಯ ಏರುಪೇ ರಿನಿಂ ದ ಆಗುವ ಕ್ಷೋ ಭೆ) ಸಿಲುಕಿ,ಮೂರೇ ನಿಮಿಷಗಳ ಅವಧಿಯಲ್ಲಿ ಆರು ಸಾವಿರ ಅಡಿಗಳಷ್ಟು ಕೆಳಕ್ಕೆ ಕುಸಿದ ಘಟನೆ ನಡೆಯಿತು.
ಇದರ ಪರಿಣಾಮ 22 ಮಂದಿಯ ಬೆನ್ನುಮೂಳೆಗೆ) ಗಾಯಗಳಾಗಿವೆ. ಇನ್ನು 6 ಮಂದಿಯ ತಲೆಗೆ ಗಾಯಗಳಾಗಿವೆ ಎಂಬುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.ಈ ಸಮಯದಲ್ಲಿ 73 ವರ್ಷದ ಬ್ರಿಟಿಷ್ ವ್ಯಕ್ತಿ ಸಾವನ್ನಪ್ಪಿದ್ದರು.
ಅವಘಡದಲ್ಲಿ ಸುಮಾರು 60 ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು. ಇದರಲ್ಲಿ 40 ರೋಗಿಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಗಾಯಗೊಂಡವರಲ್ಲಿ 20 ಜನರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಆದರೆ ಯಾರೊಬ್ಬರೂ ಜೀವಕ್ಕೆ ಅಪಾಯವಿಲ್ಲ ಎಂದು ಸಮಿತಿವೇಜ್ ಶ್ರೀನಾಕಾರಿನ್ ಆಸ್ಪತ್ರೆಯ ನಿರ್ದೇಶಕ ಡಾ.ಅದಿನುನ್ ಕಿಟ್ಟಿರತನಪೈಬುಲ್ ತಿಳಿಸಿದ್ದಾರೆ.
ಲಂಡನ್ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಮಂಗಳವಾರ ದಿಢೀರ್ ಪ್ರಕ್ಷುಬ್ಧತೆ ಉಂಟಾಗಿತ್ತು. ಪರಿಣಾಮ ಮೂರು ನಿಮಿಷಗಳಲ್ಲಿ 6,000 ಅಡಿಗೆ ವಿಮಾನ ಕುಸಿದಿತ್ತು. ಕೂಡಲೇ ವಿಮಾನವನ್ನು ಬ್ಯಾಂಕಾಕ್ನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಈ ಸಮಯದಲ್ಲಿ 73 ವರ್ಷದ ಬ್ರಿಟಿಷ್ ವ್ಯಕ್ತಿ ಸಾವನ್ನಪ್ಪಿದ್ದರು. . 211 ಪ್ರಯಾಣಿಕರು ಮತ್ತು 18 ಸಿಬ್ಬಂದಿ ಸೇರಿದಂತೆ ಒಟ್ಟು 229 ಮಂದಿ ವಿಮಾನದಲ್ಲಿದ್ದರು.