ಬೀಜಿಂಗ್, ಜೂ 04(DaijiworldNews/AK): ಚಂದ್ರನ ಅಂಗಳದಲ್ಲಿನ ಕಲ್ಲು ಮತ್ತು ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ತರಲಿರುವ ತನ್ನ ಬಾಹ್ಯಾಕಾಶ ನೌಕೆಯು ಭೂಮಿಯತ್ತ ಪ್ರಯಾಣ ಆರಂಭಿಸಿದೆ ಎಂದು ಚೀನಾ ಹೇಳಿದೆ.
ಕಳೆದ ತಿಂ ಗಳು ಉಡಾವಣೆ ಮಾಡಲಾಗಿದ್ದ ಚೇಂಜ್’ಇ-6 ಹೆಸರಿನ ಬಾಹ್ಯಾಕಾಶ ನೌಕೆಯು ಇತ್ತೀ ಚೆಗೆ ಚಂ ದ್ರನ ಮೇ ಲ್ಮೈನಲ್ಲಿ ಇಳಿದಿತ್ತು. ಈಗಾಗಲೇ ಚಂದ್ರನ ಮೇಲ್ಮೈನಲ್ಲಿ ಸಂಗ್ರಹಿಸಿರುವ ಮಣ್ಣು ಮತ್ತು ಕಲ್ಲಿನ ಮಾದರಿಯನ್ನು ನೌಕೆಯಲ್ಲಿನ ಪೆಟ್ಟಿಗೆಯಲ್ಲಿಟ್ಟುಕೊಂಡಿದ್ದು, ಜೂನ್ 25ರಂದು ಚೀ ನಾದ ಇನ್ನರ್ ಮಂಗೋ ಲಿಯಾ ಪ್ರಾಂತ್ಯದ ಮರುಭೂಮಿಯಲ್ಲಿ ಬಂದಿಳಿಯಲಿದೆ ಎಂದು ಚೀನಾ ಹೇಳಿದೆ.