ಕಠ್ಮಂಡು, ಜು. 12(DaijiworldNews/AA): ಭೂಕುಸಿತ ಸಂಭವಿಸಿ 63 ಮಂದಿ ನಾಪತ್ತೆಯಾಗಿರುವ ಘಟನೆ ನೇಪಾಳದ ತ್ರಿಶೂಲಿ ನದಿ ಸಮೀಪ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ.
ನದಿಯ ನೀರಿನಲ್ಲಿ ಎರಡು ಬಸ್ ಗಳು ಕೊಚ್ಚಿ ಹೋಗಿದ್ದು, ಈ ಬಸ್ ಗಳಲ್ಲಿ 61ಮಂದಿ ಪ್ರಯಾಣಿಕರಿದ್ದರು. ಹಾಗೂ ಇಬ್ಬರು ಚಾಲಕರು ಸೇರಿದಂತೆ ಬಸ್ಗಳಲ್ಲಿ ಇದ್ದ 63 ಮಂದಿ ಪ್ರಯಾಣಿಕರು ನಾಪತ್ತೆಯಾಗಿದ್ದಾರೆ.
ಇಂದು ಬೆಳಗ್ಗೆ 3.30ರ ಸುಮಾರಿಗೆ ಮದನ್-ಆಶ್ರಿತ್ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಬಸ್ ನಲ್ಲಿದ್ದವರೆಲ್ಲರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ ಎಂದು ನೇಪಾಳದ ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಘಟನಾ ಸ್ಥಳದಲ್ಲಿ ಈಗಾಗಲೇ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ಈ ಶೋಧ ಕಾರ್ಯಕ್ಕೆ ಮಳೆ ಅಡ್ಡಿಯುಂಟುಮಾಡಿದೆ ಎಂದು ಮದನ್ ನಗರದ ಜಿಲ್ಲಾಧಿಕಾರಿ ಹೇಳಿದ್ದಾರೆ.