ಜೆರುಸಲೇಂ, ಜು.31(DaijiworldNews/AK): ಗಾಜಾದ ದಕ್ಷಿಣ ಪ್ರದೇಶವಾದ ಖಾನ್ ಯೂನಿಸ್ನಲ್ಲಿ ಕಳೆದ ತಿಂಗಳು ನಡೆಸಿದ ದಾಳಿಯಲ್ಲಿ ಹಮಾಸ್ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ಡೀಫ್ ಹತ್ಯೆಯಾಗಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ಗುರುವಾರ ಘೋಷಿಸಿದೆ.
ಟೆಹ್ರಾನ್ನಲ್ಲಿ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆ ಹತ್ಯೆಯಾದ ಒಂದು ದಿನದ ಬಳಿಕ ಡೀಫ್ ಹತ್ಯೆಯಾಗಿದೆ ಎಂದು ಹಮಾಸ್ ದೃಢೀಕರಿಸಿದೆ.
ಜುಲೈ 13 ರಂದು ಐಡಿಎಫ್ ಫೈಟರ್ ಜೆಟ್ಗಳು (ಇಸ್ರೇಲಿ ಸೇನೆ) ಖಾನ್ ಯೂನಿಸ್ ಪ್ರದೇಶದ ಮೇಲೆ ದಾಳಿ ನಡೆಸಿದ್ದವು. ದಾಳಿಯಲ್ಲಿ ಮೊಹಮ್ಮದ್ ಡೀಫ್ ಹತ್ಯೆಯಾಗಿದೆ ಎಂದು ಮಿಲಿಟರಿ ದೃಢೀಕರಿಸಿದೆ.
1,197 ಜನರ ಸಾವಿಗೆ ಕಾರಣವಾದ ದಕ್ಷಿಣ ಇಸ್ರೇಲ್ ಮೇಲಿನ ಹಮಾಸ್ ದಾಳಿಯ ಹಿಂದಿನ ರೂವಾರಿ ಡೀಫ್. ಈತನಿಂದಲೇ ಹತ್ಯಾಕಂಡ ನಡೆದಿದೆ. ಈತ ಇಸ್ರೇಲ್ ವಿರುದ್ಧ ಹಲವಾರು ದಾಳಿಗಳನ್ನು ನಡೆಸಿದ್ದಾನೆ ಎಂದು ಮಿಲಿಟರಿ ತಿಳಿಸಿದೆ.ಈತ ಗಾಜಾದಲ್ಲಿ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ನೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದ. ಯುದ್ಧದ ಸಮಯದಲ್ಲಿ ಹಮಾಸ್ನ ಮಿಲಿಟರಿ ವಿಭಾಗದ ಹಿರಿಯ ಸದಸ್ಯರಿಗೆ ಆಜ್ಞೆ ಮತ್ತು ಸೂಚನೆಗಳನ್ನು ನೀಡುವ ಮೂಲಕ ಗಾಜಾ ಪಟ್ಟಿಯಲ್ಲಿ ಹಮಾಸ್ನ ಭಯೋತ್ಪಾದಕ ಚಟುವಟಿಕೆ ನಿಯಂತ್ರಿಸುತ್ತಿದ್ದ ಎಂದು ಹೇಳಲಾಗುತ್ತಿದೆ.