ಇಸ್ಲಾಮಾಬಾದ್, ಆ.12(DaijiworldNews/AA): ವಸತಿ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಮಾಜಿ ಮುಖ್ಯಸ್ಥ ಫೈಜ್ ಹಮೀದ್ ಅವರನ್ನು ಬಂಧಿಸಲಾಗಿದೆ.
ಪಾಕ್ನ ಸುಪ್ರೀಂ ಕೋರ್ಟ್ನ ಆದೇಶದಂತೆ, ಪಾಕಿಸ್ತಾನ ಸೇನೆಯ ಸಾರ್ವಜನಿಕ ಸಂಪರ್ಕ ವಿಭಾಗವು ಲೆಫ್ಟಿನೆಂಟ್ ವಿರುದ್ಧ ಮಾಡಿದ ಟಾಪ್ ಸಿಟಿ ಕೇಸ್ನಲ್ಲಿನ ದೂರುಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಸೇನೆಯು ತನಿಖೆ ನಡೆಸುತ್ತಿದೆ. ಪಾಕ್ ಸೇನಾ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ವಿರುದ್ಧ ಸೂಕ್ತ ಶಿಸ್ತು ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಪಾಕ್ನ ಖಾಸಗಿ ವಸತಿ ಯೋಜನೆಯಾದ ಟಾಪ್ ಸಿಟಿ, ಹಮೀದ್ ವಿರುದ್ಧ ಆರೋಪಗಳನ್ನು ಮಾಡಿದೆ. ಟಾಪ್ ಸಿಟಿ ಮಾಲೀಕ ಮೊಯೀಜ್ ಖಾನ್ ಅವರ ಕಚೇರಿಗಳು ಮತ್ತು ನಿವಾಸದ ಮೇಲೆ ಹಮೀದ್ ದಾಳಿ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇನ್ನು ಹಮೀದ್ ವಿರುದ್ಧದ ಅಧಿಕಾರ ದುರುಪಯೋಗದ ಆರೋಪಗಳನ್ನು ತನಿಖೆ ನಡೆಸಲು ಪಾಕ್ ಸೇನೆಯು ಏಪ್ರಿಲ್ನಲ್ಲಿ ತನಿಖಾ ಸಮಿತಿಯನ್ನು ರಚನೆ ಮಾಡಿತ್ತು.