ಢಾಕಾ, ಆ.15 (DaijiworldNews/TA): ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವಿರುದ್ಧದ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಅವರನ್ನು ಹಸ್ತಾಂತರಿಸುವ ಬಗ್ಗೆ ಸರ್ಕಾರವು ಶೀಘ್ರದಲ್ಲೇ ನಿರ್ಧರಿಸಲಿದೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಮೊಹಮ್ಮದ್ ತೌಹಿದ್ ಹೊಸೈನ್ ಹೇಳಿದ್ದಾರೆ.
ಬಾಂಗ್ಲಾ ಸರ್ಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆ ಹಸೀನಾ ಈ ತಿಂಗಳ ಆರಂಭದಲ್ಲಿ ಭಾರತಕ್ಕೆ ಪಲಾಯನ ಮಾಡಿದ್ದರು ಎಂಬುವುದು ಪ್ರಸ್ತುತ . ಹಸೀನಾ “ಹಲವು ಪ್ರಕರಣಗಳನ್ನು” ಎದುರಿಸುತ್ತಿದ್ದಾರೆ.
ಮಾಜಿ ಪ್ರಧಾನಿಯನ್ನು ಹಸ್ತಾಂತರಿಸುವ ಅಂತಿಮ ನಿರ್ಧಾರವು ದೇಶದ ಗೃಹ,ಕಾನೂನು ಸಚಿವರಿಗೆ ಬಿಟ್ಟದ್ದು ಎಂದು ಹೇಳಿಕೆ ನೀಡಿದ್ದಾರೆ.ಇನ್ನು ರಾಯಿಟರ್ಸ್ ಪ್ರಕಾರ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ವಿಷಯದಲ್ಲಿ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ ಎಂಬುವುದು ವರದಿ.