ಪಡುಬಿದ್ರಿ, ಆ,16 (DaijiworldNews/AK) :ಬಸ್ಸು ಮತ್ತು ಕಂಟೈನರ್ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಚಾಲಕರಿಬ್ಬರು ಗಾಯಗೊಂಡ ಘಟನೆ ಪಡುಬಿದ್ರಿ -ಕಾರ್ಕಳ ರಾಜ್ಯ ಹೆದ್ದಾರಿಯ ಸಾಂತೂರುಕೊಪ್ಲ ಬಲ್ಲಿ ನಡೆದಿದೆ.

ಪಡುಬಿದ್ರಿ ಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಬಸ್ಸು ಸಾಂತೂರು ಕೊಪ್ಲ ದ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರ್ಕಳ ದಿಂದ ಪಡುಬಿದ್ರಿ ಕಡೆಗೆ ಬರುತ್ತಿದ್ದ ಕಂಟೈನರ್ ಲಾರಿಗೆ ಮುಖಾಮುಖಿ ಢಿಕ್ಕಿಯಾಗಿದೆ.
ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿದ್ದರೂ ಕೂಡಾ ಬೆರಳೆಣಿಕೆಯ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಘಟನೆಯಿಂದಾಗಿ ಬಸ್ಸು ರಸ್ತೆ ಬದಿಗೆ ಸರಿದು ನಿಂತಿದ್ದು, ಬಸ್ಸು ಮತ್ತು ಕಂಟೈನರ್ ನ ಮುಂಭಾಗ ಸಂಫೂರ್ಣ ನಜ್ಜುಗುಜ್ಜಾಗಿದೆ.ಸ್ಥಳಕ್ಕೆ ಪಡುಬಿದ್ರಿ ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.