ಬಂಟ್ವಾಳ, ಆ,16 (DaijiworldNews/AK): ಮೆಲ್ಕಾರಿನ ಸರ್ವೀಸ್ ರಸ್ತೆಯ ಒಂದು ಭಾಗದಲ್ಲಿ ಕೆ.ಎನ್.ಆರ್.ಸಿ.ಕಂಪೆನಿ ಡಾಮರೀಕರಣ ಕಾಮಗಾರಿಯನ್ನು ಆರಂಭಿಸಿದೆ.

ಬಿಸಿರೋಡಿನಿಂದ ಮೆಲ್ಕಾರ್ ಗೆ ಹೋಗುವ ಸರ್ವೀಸ್ ರಸ್ತೆಗೆ ಮೆಲ್ಕಾರಿನ ಪೇಟೆ ಭಾಗದಲ್ಲಿ ಡಾಮರೀಕರಣ ಕಾಮಗಾರಿಗೆ ಇಂದು ಸಂಜೆ ವೇಳೆ ಚಾಲನೆ ನೀಡಿದೆ.ಮಳೆಗೆ ಕೆಸರು, ಮಳೆ ನಿಂತರೆ ಉಸಿರಾಟಕ್ಕೆ ತೊಂದರೆಯಾಗುವಂತಹ ದೂಳು ಸಮಸ್ಯೆ ಎಂದು ಆರೋಪಿಸಿ ಇಲ್ಲಿನ ವರ್ತಕರು ಹಾಗೂ ಸಾರ್ವಜನಿಕರು ಕಂಪೆನಿಯ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು.
ತಾತ್ಕಾಲಿಕವಾಗಿ ನಮಗೆ ಡಾಮರು ಹಾಕಿಕೊಡುವಂತೆ ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ ಕಂಪೆನಿ ಅಧಿಕಾರಿಗಳಲ್ಲಿ ತಾಕೀತು ಮಾಡಿದ್ದರು. ಅ ಸಂದರ್ಭದಲ್ಲಿ ಒಂದು ವಾರದ ಗಡುವು ನೀಡಿದ್ದ ಕಂಪನಿಯ ಕೊಟ್ಟ ಮಾತಿನಂತೆ ಡಾಮರೀಕರಣ ಕಾಮಗಾರಿಯನ್ನು ಆರಂಭಿಸಿದೆ.