ಬಂಟ್ವಾಳ, ಆ,16 (DaijiworldNews/AK) : ಶಿಕ್ಷಣವೇ ಸ್ವಾತಂತ್ರ್ಯ ಸ್ವಾವಲಂಬಿ ಬದುಕೇ ಸ್ವಾತಂತ್ರ್ಯದ ಲಕ್ಷಣ ಭಾರತ ರಾಷ್ಟ್ರ 78 ನೇ ಸ್ವಾತಂತ್ರ್ಯೋತ್ಸವ ವನ್ನು ಆಚರಿಸುವ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್ ತಮ್ಮ ಸಾಮಾಜಿಕ ಅಭಿವೃದ್ಧಿ ನಿಧಿಯಿಂದ ಲೊರೆಟ್ಟೊ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ,ಬಂಟ್ವಾಳ ಇವರಿಗೆ ಶಾಲಾ ವಾಹನವನ್ನು ಕೊಡುಗೆಯಾಗಿ ನೀಡುವ ಮೂಲಕ ಸ್ವಾತಂತ್ರ್ಯೋತ್ಸವ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು



ಮಂಗಳೂರಿನ ಕರ್ನಾಟಕ ಬ್ಯಾಂಕ್ ಪ್ರಧಾನ ಕಛೇರಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಿಇಓ ಹಾಗೂ ಪ್ರಧಾನ ಆಡಳಿತ ನಿರ್ದೇಶಕರು ಆಗಿರುವ ಶ್ರೀ ಕೃಷ್ಣನ್ ಹರಿಹರ ಶರ್ಮ ಧ್ವಜಾರೋಹನಗೈದು ತಮ್ಮ ಬ್ಯಾಂಕಿನ ಮೂಲಕ ಸಾಮಾಜಿಕ ಅಭಿವೃದ್ಧಿ ನಿಧಿಯಿಂದ ನೀಡುವ ಐವತ್ತು ವಾಹನಗಳನ್ನು ವಿವಿಧ ಶಾಲಾ ಕಾಲೇಜುಗಳಿಗೆ ನೀಡಿ ಸ್ವತಂತ್ರ ಭಾರತದಲ್ಲಿ ಸ್ವಾವಲಂಬಿ ಬದುಕನ್ನು ನಡೆಸಲು ಹಾಗೂ ಮಕ್ಕಳಲ್ಲಿ ಶಿಕ್ಷಣ ಸ್ವಾತಂತ್ರ್ಯವನ್ನು ರೂಪಿಸಲು ಕರ್ನಾಟಕ ಬ್ಯಾಂಕಿನ ಕೊಡುಗೆಯನ್ನು ವಿವರಿಸಿದರು .
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರು ಹಾಗೂ ಲೊರೆಟ್ಟೊ ಮಾತಾ ಚರ್ಚಿನ ಧರ್ಮಗುರುಗಳಾದ ವಂದನೀಯ ಸ್ವಾಮಿ ಫ್ರಾನ್ಸಿಸ್ ಕ್ರಾಸ್ತ, ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಬಂಟ್ವಾಳ ಆಮ್ಟಾಡಿ ಗ್ರಾಮ ಪಂಚಾಯತ್ ನ ಸದಸ್ಯರಾದ ಶ್ರೀ ಫೆಲಿಕ್ಸ್ ಡಿಸೋಜಾ ರವರಿಗೆ ಬಸ್ಸಿನ ಕೀಯನ್ನು ಹಸ್ತಾಂತರಿಸಿ ಶುಭ ಹಾರೈಸಿದರು.
ಶಾಲೆಗೆ ಹೊಸ ಬಸ್ಸನ್ನು ಕೊಡುಗೆಯಾಗಿ ನೀಡಿದ ಕರ್ನಾಟಕ ಬ್ಯಾಂಕಿನ ಪ್ರಧಾನ ನಿರ್ದೇಶಕರಿಗೆ ಹಾಗೂ ಬ್ಯಾಂಕಿನ ಆಡಳಿತ ಮಂಡಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ಕೃಷ್ಣನ್ ಹರಿಹರ ಶರ್ಮ ರವರ ಧರ್ಮಪತ್ನಿಯವರಾದ ಸುಗುಣ ಕೃಷ್ಣನ್ ,ಶ್ರೀ ಹರ್ಲೆ ವಸಂತ್ ಆರ್ , ಎಜಿಎಮ್ ಶ್ರೀಮತಿ ಜೇನ್ ಸಲ್ದಾನ , ಶಾಖಾ ಪ್ರಬಂಧಕರಾದ ಶ್ರೀ ರಮೇಶ್ , ಪಿ ಆರ್ ಓ -ಎಜಿಎಂ ಮಾಧವ ನಾವ್ಡಾ ಹಾಗೂ ಬ್ಯಾಂಕಿನ ಇತರ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.