ಕುಂದಾಪುರ, ಆ.17(DaijiworldNews/AA): ಇತ್ತೀಚೆಗಷ್ಟೇ 7 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದ, ಕುಂದಾಪುರ ತಾಲೂಕಿನ ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಕಳ್ಳತನವಾಗಿರುವ ಬಗ್ಗೆ ವರದಿಯಾಗಿದೆ.






ಕೆಲ ತಿಂಗಳ ಹಿಂದಷ್ಟೇ ದೇವಸ್ಥಾನದ ಜೀರ್ಣೋದ್ಧಾರ ಮಾಡಲಾಗಿತ್ತು. ಅಂದಾಜು 40 ಸಾವಿರಕ್ಕೂ ಅಧಿಕ ನಗದನ್ನು ಕಳ್ಳ ಕಳವು ಮಾಡಿದ್ದು, ಈ ಹಣವನ್ನು ತಿಂಗಳ ಸತ್ಯನಾರಾಯಣ ಪೂಜೆಗಾಗಿ ಸಂಗ್ರಹಿಸಲಾಗಿತ್ತು ಎನ್ನಲಾಗಿದೆ. ಕಾಣಿಕೆ ಡಬ್ಬಿ ಒಡೆದು ಹಣ ಎಗರಿಸಿದ ಕಳ್ಳ ಪರಾರಿಯಾಗಿದ್ದು, ಈತನ ಕಳ್ಳತನದ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಳ್ಳನು ಬಾಗಿಲ ಚಿಲಕದ ಸ್ಕ್ರೂ ತೆಗೆದು ಸುತ್ತು ಪೌಳಿ ಪ್ರವೇಶಿಸಿದ್ದಾನೆ. ಪೌಳಿ ಪ್ರವೇಶಿಸಿದ ಆತ ಚಪ್ಪಲಿ ಹಾಕಿಕೊಂಡೇ ದೇವರಿಗೆ ಕೈ ಮುಗಿದು ಬಳಿಕ ಕಳ್ಳತನ ಕೃತ್ಯ ನಡೆಸಿದ್ದಾನೆ.