ಉಡುಪಿ, ಆ.18(DaijiworldNews/AA): ಮಂಗಳೂರು-ಮುಂಬೈ ಮತ್ಸ್ಯಗಂಧ ಎಕ್ಸ್ ಪ್ರೆಸ್ ನ ಹಳೆಯ ಬೋಗಿಗಳನ್ನು ಬದಲಿಸಿ ಹೊಸ ಎಲ್ಎಚ್ಬಿ ಕೋಚ್ಗಳನ್ನು ಅಳವಡಿಸುವಂತೆ ಸಂಸದ ಕೋಟಾ ಶ್ರೀನಿವಾಸ್ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ ಒಂದೇ ವಾರದಲ್ಲಿ ಮತ್ಸ್ಯಗಂಧ ರೈಲಿನ ಎಸಿ ಕೋಚ್ನ ಮೇಲ್ಛಾವಣಿ ಕುಸಿದಿರುವುದು ಬೆಳಕಿಗೆ ಬಂದಿದೆ.


ಮೇಲ್ಛಾವಣಿ ಕುಸಿತದ ಬಳಿಕ ಕರಾವಳಿ ಪ್ರದೇಶ ಮತ್ತು ಮಹಾರಾಷ್ಟ್ರದ ಪ್ರಯಾಣಿಕರು ಸಹ ಮತ್ಸ್ಯಗಂಧ ರೈಲಿನಲ್ಲಿ ಎಲ್ಹೆಚ್ಬಿ ಕೋಚ್ಗಳನ್ನು ಬಳಸುವಂತೆ ಒತ್ತಾಯಿಸುತ್ತಿದ್ದಾರೆ. ಮತ್ಸ್ಯಗಂಧ ಎಕ್ಸ್ ಪ್ರೆಸ್ ಆರಂಭವಾಗಿ 26 ವರ್ಷಗಳು ಕಳೆದಿದ್ದರೂ, ದಕ್ಷಿಣ ರೈಲ್ವೆಯು ಹಳೆಯ ಐಸಿಎಫ್ ಕೋಚ್ಗಳಲ್ಲಿ ರೈಲನ್ನು ಓಡಿಸುತ್ತಿದೆ. ಎಲ್ಎಚ್ಬಿ ಕೋಚ್ಗಳ ಬೇಡಿಕೆಯನ್ನು ಇಲ್ಲಿಯವರೆಗೆ ಪರಿಗಣಿಸಲಾಗಿಲ್ಲ.
ಎಸಿ ಕೋಚ್ನ ಮೇಲ್ಛಾವಣಿ ಕುಸಿತದ ಬಗ್ಗೆ ಮಾಹಿತಿ ಕೋರಿದ ಕೋಟ ಶ್ರೀನಿವಾಸ್ ಪೂಜಾರಿ ಅವರು ಆದಷ್ಟು ಬೇಗ ದಕ್ಷಿಣ ರೈಲ್ವೆ ಮತ್ತು ಕೇಂದ್ರ ರೈಲ್ವೇ ಸಚಿವರ ಗಮನಕ್ಕೆ ತಂದು ಕೋಚ್ಗಳನ್ನು ಬದಲಾಯಿಸಿ ಎಲ್ಎಚ್ಬಿ ಕೋಚ್ಗಳನ್ನು ನೀಡುವುದಾಗಿ ಭರವಸೆ ನೀಡಿದರು. ಇನ್ನು ಈ ಮಧ್ಯೆ ಮತ್ಸ್ಯಗಂಧದ ಎಸಿ ಕೋಚ್ನ ಮೇಲ್ಛಾವಣಿ ಕುಸಿದಿರುವುದು ಹಾಗೂ ಕೋಟ ಶ್ರೀನಿವಾಸ್ ಪೂಜಾರಿ ಅವರು ಆಗಸ್ಟ್ 23 ರಂದು ಸಲ್ಲಿಸಿದ ಪತ್ರವನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.