ಪುತ್ತೂರು, ನ.24(DaijiworldNews/AA): ಮಾದಕ ಪದಾರ್ಥ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಚಿಕ್ಕಮುಟ್ನೂರು ಗ್ರಾಮದ ಸಾಲ್ಮರದಲ್ಲಿ ನಡೆದಿದೆ.
ಮಹಮ್ಮದ್ ಇಬಾಶ್ (19) ಮತ್ತು ಅಹಮ್ಮದ್ ಇಚಾಝ್ (27) ಬಂಧಿತರು.
ನಗರ ಪೊಲೀಸರು ರೌಂಡ್ಸ್ ನಲ್ಲಿದ್ದಾಗ ಸಾರ್ವಜನಿಕರ ಮಾಹಿತಿ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಲಾಯಿತು. ಈ ವೇಳೆ ಇವರಿಬ್ಬರು ಮಾದಕ ಪದಾರ್ಥ ಸೇವಿಸಿರುವುದು ಬೆಳಕಿಗೆ ಬಂದಿದೆ. ಇದೀಗ ಇವರಿಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.