ಕಾರ್ಕಳ, ನ.24(DaijiworldNews/AA): ಖಾಸಗಿ ಶಾಲಾ ವಾಹನ ಮತ್ತು ಬೈಕ್ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಿಯಾರು-ಜೋಡುಕಟ್ಟೆ ಎಂಬಲ್ಲಿ ನ.23ರಂದು ಸಂಭವಿಸಿದೆ.
ಕರಲಗುಡ್ಡೆ ಸುರೇಖಾ ನಗರದ ನಿವಾಸಿ ಅಜಿತ್ ಕುಮಾರ್(21) ಮೃತ ದುರ್ದೈವಿ.
ಅಪಘಾತ ಸಂದರ್ಭ ಶಾಲೆಯ ಬಸ್ ನಲ್ಲಿ ವಿದ್ಯಾರ್ಥಿಗಳು ಇರಲಿಲ್ಲ. ಖಾಲಿ ಬಸ್ ಎನ್ನಲಾಗಿದೆ. ಬಸ್ ಮದ್ಯ ಭಾಗಕ್ಕೆ ಬೈಕ್ ಢಿಕ್ಕಿಯಾಗಿದ್ದು, ಬೈಕ್ ಸವಾರನ ತಲೆಗೆ ಗಂಭೀರ ಗಾಯವಾಗಿದೆ. ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.