ಕಾರ್ಕಳ, ನ.24(DaijiworldNews/AA): ಆಹಾರ ಹುಡುಕಿ ಬಂದಿದ್ದ ಚಿರತೆಯೊಂದು ಆಯತಪ್ಪಿ ಬಾವಿಗೆ ಬಿದ್ದಿದ್ದು, ಬಾವಿಯ ಪೊಟರೆಯಲ್ಲಿ ಅವಿತುಕುಳಿತುಕೊಂಡಿದ್ದ ಘಟನೆ ನಿಟ್ಟೆ ಗ್ರಾಮದ ಎರ್ಮಂಜಪಲ್ಲ ಬಳಿಯ ಬಾಗಿ ಎನ್ನುವವರ ಮನೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಬಾವಿಯಿಂದ ಸುರಕ್ಷಿತವಾಗಿ ಚಿರತೆಯನ್ನು ಹೊರತೆಗೆದು ಸೆರೆ ಹಿಡಿಯುವ ಕಾರ್ಯಚರಣೆ ನಡೆಯುತ್ತಿದೆ. ಅದಕ್ಕಾಗಿ ಬಾವಿಯ ಮೇಲ್ಭಾಗದಲ್ಲಿ ಬಲೆಯನ್ನು ಅಳವಡಿಸಲಾಗಿದ್ದು, ಬೃಹದಾಕಾರದ ಏಣಿಯನ್ನು ಬಾವಿಗೆ ಇಳಿಸಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಗ್ರಾಮಸ್ಥರು ಆಗಮಿಸುತ್ತಿದ್ದಾರೆ.