ಸುಳ್ಯ,ನ.25(DaijiworldNews/TA):ಕನ್ನಡ ಶಾಲೆಗಳಲ್ಲಿ ಕನ್ನಡದ ಬೇರುಗಳು ಗಟ್ಟಿಯಾಗಿದ್ದು ಅವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಕೇಂದ್ರ ಸಾಹಿತ್ಯ ಪರಿಷತ್ ಅಗತ್ಯವಾಗಿ ಮಾಡಬೇಕು ಎಂದು ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಧನಂಜಯ ಕುಂಬ್ಳೆ ಹೇಳಿದರು.
ಅವರು ಸುಳ್ಯದ ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಇಲ್ಲಿಯ ಡಾ.ಕುರುಂಜಿ ವೆಂಕಟ್ರಮಣ ಗೌಡ ವೇದಿಕೆ ನಿರಂಜನ ಸಭಾಂಗಣದಲ್ಲಿ ನಡೆದ 27ನೇ ಸಾಹಿತ್ಯ ಸಮ್ಮೇಳನದ ಸಮರೋಪ ಸಮಾರಂಭದಲ್ಲಿ ಅವರು ಸಮರೋಪ ಭಾಷಣ ಮಾಡಿ, ಮಾತನಾಡಿದರು. ಕೇಂದ್ರ ಸಾಹಿತ್ಯ ಸಮ್ಮೇಳನಕ್ಕೆ ಸರಕಾರ 25 ಕೋಟಿ ಅನುದಾನ ನೀಡುತ್ತಿದೆ. ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ನೀಡದಿರುವುದು ಖೇದಕರ ಎಂದು ಹೇಳಿದರು.
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ ಪಿ ಶ್ರೀನಾಥ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ರಿಜಿಸ್ಟರ್ ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ ಸಾಧಕರನ್ನು ಕನ್ನಡ ಕಸ್ತೂರಿ ಸನ್ಮಾನ ಮಾಡಿದರು. ಸಮ್ಮೇಳನದ ಸರ್ವ ಅಧ್ಯಕ್ಷರಾದ ಲೀಲಾ ದಾಮೋದರ್ ಕುಂದಲ್ಪಾಡಿ ಮುಖ್ಯ ಅತಿಥಿಗಳಾಗಿ ಸಜ್ಜನ ಪ್ರತಿಷ್ಠಾನ ಬೀಜದ ಕಟ್ಟೆ ಇದರ ಡಾ. ಉಮ್ಮರ್ ಬೀಜದಕಟ್ಟೆ, ಕನ್ನಡ ಸಾಹಿತ್ಯ ಪರಿಷತ್ತ್ ನಿಕಟಪೂರ್ವ ಅಧ್ಯಕ್ಷರಾದ ಡಾ. ಹರಪ್ರಸಾದ್ ತುದಿಯಡ್ಕ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿದರು.
ಡಾ. ಶ್ವೇತಾ ಮಡಪ್ಪಾಡಿ ಇವರಿಗೆ ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ, ಹುಕ್ರಪ್ಪ ಉಳುವಾರು ಇವರಿಗೆ ರಕ್ಷಣಾ ಸೇವೆ, ಕುಮಾರಸ್ವಾಮಿ ತೆಕ್ಕುಂಜೆ ಇವರಿಗೆ ಸಾಹಿತ್ಯ ಕ್ಷೇತ್ರದಲ್ಲಿ, ಸರಸ್ವತಿ ಚಿದಾನಂದ ಇವರಿಗೆ ಶಿಕ್ಷಣ ಕ್ಷೇತ್ರದಲ್ಲಿ, ಗಣೇಶ್ ಭಟ್ ಇವರಿಗೆ ಹಿರಿಯ ಲೆಕ್ಕ ಪರಿಶೋಧಕರು, ಕೆ ಆರ್ ಪದ್ಮನಾಭ ಇವರಿಗೆ ಸಹಕಾರ, ಸಮಾಜ ಸೇವೆ, ಡಾ. ಲೀಲಾದರು ಡಿ ವಿ ಇವರಿಗೆ ಆಡಳಿತ, ವೈದ್ಯಕೀಯ ತೇಜೇಶ್ವರ ಕುಂದಲ್ಪಾಡಿ ಇವರಿಗೆ ಪತ್ರಿಕೋದ್ಯಮ, ಆನಂದ ಕಲ್ಲಗದ್ದೆ ಇವರಿಗೆ ಮಾಹಿತಿ ಮತ್ತು ತಂತ್ರಜ್ಞಾನ, ಸಲಿಂ ಸುಳ್ಯ ಇವರಿಗೆ ಸಮಾಜ ಸೇವೆ / ಉದ್ಯಮ ಕ್ಷೇತ್ರದಲ್ಲಿ, ಕೇಶವ ಪರವ ಇವರಿಗೆ ಭೂತಾರಾಧನೆ ಕ್ಷೇತ್ರದ ಸಾಧನೆಗಾಗಿ ಕನ್ನಡ ಕಸ್ತೂರಿ ಸನ್ಮಾನವನ್ನು ಪ್ರದಾನ ಮಾಡಲಾಯಿತು.