ಸುಳ್ಯ,ನ.26(DaijiworldNews/AK): ಅರಂಬೂರು ಬಳಿ ಮಡಿಕೇರಿ ಯಿಂದ ಸುಳ್ಯ ಕಡೆಗೆ ತರಕಾರಿ ತುಂಬಿಕೊಂಡು ಬರುತ್ತಿರುವ ಪಿಕಪ್ ವಾಹನಕ್ಕೆ ಸುಳ್ಯ ಕಡೆಯಿಂದ ಪೆರಾಜೆ ಕಡೆಗೆ ಹೊಗುತ್ತಿದ್ದ ಅಲ್ಟೊಕಾರು ಡಿಕ್ಕಿಯಾಗಿ ಕಾರು ಮತ್ತು ಪಿಕಪ್ ಸ್ವಲ್ಪ ಜಖಂ ಗೊಂಡ ಘಟನೆ ನ 24 ರಂದು ರಾತ್ರಿ ಸಂಭವಿಸಿದೆ.
ಕಾರಿನ ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಗೆ ದಾಖಲಿಸಲಾಗಿದೆ.ಅಪಘಾತ ಕುರಿತು ಸುಳ್ಯ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.