ಕಾಸರಗೋಡು,ನ.27(DaijiworldNews/TA):ಕಾಂಗ್ರೆಸ್ ಮುಖಂಡರಾಗಿದ್ದ ಕುಂಟಾರು ಬಾಲನ್(45) ಕೊಲೆ ಪ್ರಕರಣದ ಪ್ರಥಮ ಆರೋಪಿಗೆ ಜೀವಾವಧಿ ಸಜೆ ಮತ್ತು ಎರಡು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಉಳಿದ ಆರೋಪಿಗಳನ್ನು ನ್ಯಾಯಾಲಯ ಖುಲಾಸೆ ಗೊಳಿಸಿದೆ.
ಆರೋಪಿ ವಿ.ರಾಧಾಕೃಷ್ಣನ್ ನಿಗೆ ಶಿಕ್ಷೆ ವಿಧಿಸಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.ದಂಡ ಮೊತ್ತವನ್ನು ಬಾಲನ್ ರ ಕುಟುಂಬಕ್ಕೆ ನೀಡುವಂತೆ ನ್ಯಾಯಾಲಯ ತೀರ್ಪು ನೀಡಿದೆ. ಉಳಿದ ಆರೋಪಿಗಳಾದ ಕಟ್ಟತ್ತ ಬೈಲ್ ನ ವಿಜಯನ್ (42) ಕುಂಟಾ ರಿನ ಕೆ.ಕುಮಾರನ್ (51), ಅತ್ತನಾಡಿಯ ದಿಲೀಪ್ ಕುಮಾರ್ (41) ನನ್ನು ಖುಲಾಸೆ ಗೊಳಿಸಿದೆ.
2008 ರ ಮಾರ್ಚ್ 27 ರಂದು ರಾತ್ರಿ ಘಟನೆ ನಡೆದಿತ್ತು. ಕಾರಿನಲ್ಲಿ ತೆರಳುತ್ತಿದ್ದಾಗ ಕುಂಟಾರು ಬಸ್ಸು ನಿಲ್ದಾಣ ಸಮೀಪ ತಡೆದು ಬಾಲನ್ ರನ್ನು ಹೊರ ಗೆಳೆದು ತಂಡ ಇರಿದು ಕೊಲೆ ಗೈದಿತ್ತು.ಆರಂಭದಲ್ಲಿ ಆದೂರು ಠಾಣಾ ಪೊಲೀಸ ರು ತನಿಖೆ ನಡೆಸಿದ್ದರು. ಆದರೆ ತನಿಖೆ ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಬಾಲನ್ ಮನೆಯವರು ಹೋರಾಟ ನಡೆಸಿದ್ದರು.ಬಳಿಕ ಕ್ರೈಂ ಬ್ರಾಂಚ್ಗೆ ತನಿಖೆ ಹಸ್ತಾಂತರಿಸಲಾಗಿತ್ತು.