ಕಾಸರಗೋಡು, ನ.28(DaijiworldNews/AK): ಮನೆಗೆ ನುಗ್ಗಿ ಎಂಟು ಪವನ್ ಚಿನ್ನಾಭರಣ ಹಾಗೂ 60 ಸಾವಿರ ರೂ. ನಗದು ಕಳವುಗೈದ ಘಟನೆಗೆ ಸಂಬಂಧಪಟ್ಟಂತೆ ಆರೋಪಿಯನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಧೂರು ಅರಂತೋಡಿನ ರೋಬರ್ಟ್ ರೋಡ್ರಿಗಸ್ (53) ಬಂಧಿತ. ಮನೆಯವರು ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಮನೆಯ ಹೊರಗಡೆ ಇರಿಸಿದ್ದ ಕೀಲಿ ಕೈ ಯನ್ನು ಬಳಸಿ ಬಾಗಿಲು ತೆರೆದು ಒಳನುಗ್ಗಿ ಈ ಕೃತ್ಯ ನಡೆಸಿದ್ದಾನೆ.
ಅರಂತೋಡಿನ ಫೆಲಿಕ್ಸ್ ಡಿಸೋಜ ರವರ ಮನೆಯಿಂದ ಕಳವು ಗೈಯಲಾಗಿತ್ತು.ತಿಂಗಳುಗಳ ಹಿಂದೆ ಕಳವು ನಡೆದಿತ್ತು. ಆದರೆ ದಿನಗಳ ಹಿಂದೆಯಷ್ಟೇ ಕೃತ್ಯ ನಡೆದಿರುವುದು ಮನೆಯವರ ಗಮನಕ್ಕೆ ಬಂದಿತ್ತು. ಕಪಾಟನ್ನು ತೆರೆದು ನೋಡಿದಾಗ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವುದು ಕಂಡು ಬಂದಿದೆ.
ಸಂಶಯದ ಮೇರೆಗೆ ರೋಬರ್ಟ್ ನನ್ನು ಕಸ್ಟಡಿಗೆ ಪಡೆದು ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.ಕೆಲದಿನ ಗಳಿಂದ ರೋಬರ್ಟ್ ನ ಚಲನ ವಲನ ಸಂಶಯಕ್ಕೆ ಕಾರಣ ವಾಗಿತ್ತು.ಈ ಹಿನ್ನಲೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವಿನ ಬಗ್ಗೆ ತಪ್ಪೊ ಪ್ಪಿ ಕೊಂಡಿದ್ದಾನೆ.