ಪುತ್ತೂರು, ನ.29(DaijiworldNews/AA): ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆಗೆ ಬೈಕ್ ಢಿಕ್ಕಿ ಹೊಡೆದು ಆಕೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲನಾ ಪರವಾನಿಗೆ ಇಲ್ಲದ ಬೈಕ್ ಸವಾರನಿಗೆ ಕೋರ್ಟ್ ದಂಡ ವಿಧಿಸಿದ್ದು, ಬೈಕ್ ಮಾಲಿಕನಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
l
2022ರ ಫೆ.27ರಂದು ನೆಟ್ಟಣಿಗೆ ಮುಟ್ನೂರು ಕೊಟ್ಯಾಡಿಯಲ್ಲಿ ಈ ಅಪಘಾತ ಸಂಭವಿಸಿತ್ತು. ಅಪಘಾತದ ವೇಳೆ ಮುಳಿಯೂರು ನಿವಾಸಿ ಶಾಹೀದ್ ಕೇರಳ ರಾಜ್ಯದ ನೋಂದಣಿಯ ಬೈಕ್ ಚಲಾಯಿಸುತ್ತಿದ್ದ. ಈತ ಚಲಾಯಿಸುತ್ತಿದ್ದ ಬೈಕ್ ರಸ್ತೆ ಬದಿಯಲ್ಲಿ ನಿಂತಿದ್ದ ದುಗ್ಗಮ್ಮ (55) ಅವರಿಗೆ ಢಿಕ್ಕಿ ಹೊಡೆದಿತ್ತು. ಈ ಬಗ್ಗೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸವಾರ ಶಾಹೀದ್ ಮತ್ತು ಬೈಕ್ ಮಾಲಕ ಮಹಮ್ಮದ್ ಶಾಕೀರ್ ವಿರುದ್ಧ ಸೆಕ್ಷನ್ 279, 338, 304(ಎ)1 ರಂತೆ ಪ್ರಕರಣ ದಾಖಲಿಸಿ, ಜೊತೆಗೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪುತ್ತೂರು ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶ ದೇವರಾಜ್ ವೈ.ಎಚ್.ಅವರ ಪೀಠ ಚಾಲನಾ ಪರವಾನಿಗೆ ಇಲ್ಲದ ಬೈಕ್ ಸವಾರ ಶಾಹೀದ್ಗೆ 5 ಸಾ.ರೂ. ದಂಡ ವಿಧಿಸಿದೆ. ಹಾಗೂ ಬೈಕ್ ಮಾಲಕ ಮಹಮ್ಮದ್ ಶಾಕೀರ್ಗೆ 2 ವರ್ಷ ಜೈಲು ಶಿಕ್ಷೆ ಮತ್ತು 5 ಸಾ. ರೂ. ದಂಡ ವಿಧಿಸಿ ತೀರ್ಪು ನೀಡಿದೆ.