ಉಡುಪಿ, ನ.29(DaijiworldNews/AK):ಉದ್ಯಾವರದ ದಂಪತಿ ಒಂದು ದಿನದ ಅಂತರದಲ್ಲಿ ಸಾವನ್ನಪ್ಪಿದ್ದ ಘಟನೆ ನಡೆದಿದೆ.ಉದ್ಯಾವರ ಪಾಲನಾ ಸಮಿತಿಯ ಉಪಾಧ್ಯಕ್ಷ ಲಾರೆನ್ಸ್ ಡಿಸಾ ಮತ್ತು ಅವರ ಪತ್ನಿ ಜೂಲಿಯಾನಾ ಡಿಸಾ ಮೃತ ದುರ್ದೈವಿಗಳು.
ಇಬ್ಬರೂ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜೂಲಿಯಾನಾ ಗುರುವಾರ, ನವೆಂಬರ್ 28 ರಂದು ನಿಧನರಾದರು, ಆದರೆ ಗಂಭೀರ ಸ್ಥಿತಿಯಲ್ಲಿದ್ದ ಲಾರೆನ್ಸ್ ಅವರು ನವೆಂಬರ್ 29, ಶುಕ್ರವಾರ ನಿಧನರಾದರು.
ಗುರುವಾರ ಬೆಳಗ್ಗೆ ಬೆಂಗಳೂರಿನಿಂದ ಮಗಳು ಆಗಮಿಸಿದ ಸಂದರ್ಭದಲ್ಲೇ ಜೂಲಿಯಾನಾ ಅವರ ನಿವಾಸದಲ್ಲಿ ಅಸ್ವಸ್ಥರಾಗಿದ್ದರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚೇತರಿಸಿಕೊಳ್ಳಲಾಗಲಿಲ್ಲ.